
ಹಾಸನ :- ಜಿಲ್ಲಾಧಿಕಾರಿಗಳು ತಾಲೂಕು ತಹಸೀಲ್ದಾರ್ ಗಳನ್ನ ಪ್ರತಿ ದಿನ ಬೆಳಗ್ಗೆ ಸಭೆ ಹೆಸರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿಕೊಳ್ಳುತ್ತಿರುವುದರಿಂದ ತಾಲೂಕು ಮಟ್ಟದಲ್ಲಿ ಕೆಲಸಗಳು ಆಗದೆ ರೈತರು ಕಾದು ಕುಳಿತಿದ್ದು, ಅವರ ಕಷ್ಟ ಕೇಳುವವರಿಲ್ಲ. ಇದನ್ನು ಕೂಡಲೇ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದು ಆದಷ್ಟು ತಹಸೀಲ್ದಾರ್ ಗಳನ್ನು ಕೇಂದ್ರ ಸ್ಥಾನದಲ್ಲಿ ಇದ್ದು, ಕೆಲಸ ಮಾಡಲು ಸೂಚನೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.
ನಗರದ ಲೋಕಾಸಭಾ ಸದಸ್ಯರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ರೈತರನ್ನು ಕೇಳುವವರೇ ಇಲ್ಲದಂತಾಗಿದೆ ಪ್ರತಿದಿನ ರೈತರ ಕಷ್ಟ ಕೇಳಬೇಕಿದ್ದ ಜಿಲ್ಲಾಧಿಕಾರಿಗಳು ತಮ್ಮ ಕಛೇರಿ ಕೆಲಸ ನಿಲ್ಲಿಸಿ ಬೇರೆ ಯಾವುದೇ ಕೆಲಸ ಇದ್ರೆ ಆಮೇಲೆ ಮಾಡಿಕೊಳ್ಳಿ. ರೈತರ ಜೊತೆ ಆಡವಾಡಬೇಡಿ. ಆರಾತ್ರಿ ೮ ಗಂಟೆವರೆಗೂ ಡಿಸಿ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳನ್ನು ಕೂರಿಸಿಕೊಂಡರೇ ಇಲ್ಲಿ ಕೆಲಸ ಮಾಡುವವರು ಯಾರು? ತಹಸೀಲ್ದಾರ್ ಇತರೆ ಅಧಿಕಾರಿಗಳನ್ನು ಡಿಸಿ ಕಛೇರಿಯಲ್ಲಿ ಕೂರಿಸಿಕೊಂಡರೇ ನಾವು ಯಾರ ಬಳಿ ಕೆಲಸ ಮಾಡಿಸಿಕೊಳ್ಳುವುದು. ವಾರಕ್ಕೆ ಐದು ದಿವಸ ಅವರ ಕಚೇರಿಯಲ್ಲಿಯೇ ಇರಲಿ. ವಾರಕ್ಕೆ ಒಂದೆರಡು ದಿನ ಕಛೇರಿಗೆ ಕರೆಯಿಸಿಕೊಳ್ಳಲಿ. ಹೆಣ್ಣಮಕ್ಕಳು ಅಳುತ್ತಿದ್ದು, ಗೋಗರಿಯುತ್ತಿದ್ದಾರೆ. ನಿಮ್ಮ ಕಛೇರಿಯಲ್ಲಿ ಇರುವುದು ದುರದೃಷ್ಟಕರವಾಗಿದೆ ಎಂದು ರೇವಣ್ಣ ಬೇಸರವ್ಯಕ್ತಪಡಿಸಿದರು.
ಡಿಸಿಯವರು ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಈಗೆಲ್ಲ ಆದರೇ ನಾನು ಸಹಿಸುವುದಿಲ್ಲ. ಆಗುವುದಾದರೇ ನಾನು ಮುಖ್ಯ ಕಾರ‍್ಯದರ್ಶಿಯ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.
ಬರ ಪೀಡಿತ ಹಾಸನ ಜಿಲ್ಲೆಯಲ್ಲಿ ಬರ ಪರಿಹಾರದ ಕೆಲಸಗಳನ್ನು ಮಾಡಬೇಕಿರುವ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಹಾಸನಾಂಬ ಉತ್ಸವಕ್ಕೆ ನಿಯೋಜನೆ ಮಾಡಬಾರದು, ಇದರಿಂದ ರೈತರ ಕೆಲಸಗಳು ಬಾಕಿ ಆಗಲಿವೆ, ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬೇರೆ ಅಧಿಕಾರಿಗಳನ್ನು ಕರೆದುಕೊಳ್ಳಲೆಂದು ಒತ್ತಾಯಿಸಿದರು.
ಹಾಸನಾಂಬೆ ಹೆಸರಿನಲ್ಲಿ ರೈತರನ್ನು ಹಾಳು ಮಾಡಬೇಡಿ ಎಂದರು. ಹೇಮಾವತಿ ಜಲಾಶಯ ಯೋಜನೆ ಅಡಿಯಲ್ಲಿ ಅಣೆಕಟ್ಟಿನಿಂದ ೬ ಲಕ್ಷ ೫೬ ಸಾವಿರ ಎಕರೆ ಪ್ರದೇಶಕ್ಕೆ ೪೩ ಟಿಎಂಸಿ ನೀರು ಹರಿಸಬೇಕು ಎಂಬ ಆದೇಶ ಇದೆ. ಆದರೆ ಈ ವರೆಗೆ ಕೇವಲ ೧೩ ಟಿಎಂಸಿ ನೀರು.ಮಾತ್ರ ಬಿಟ್ಟಿದ್ದಾರೆ. ಎಷ್ಟು ಬೆಳೆ ಬೆಳೆದಿದ್ದಾರೆ, ಎಷ್ಟು ಜನ ಬೆಳೆದಿಲ್ಲ ಬಗ್ಗೆ ಸರ್ವೆ ಮಾಡಿಸಬೇಕು ಎಂದು ಒತ್ತಾಯಿಸಿದರು..
ಡ್ಯಾಂ ನಲ್ಲಿ ಇಂದಿನ ಜಲಾಶಯ ನೀರಿನ ಮಟ್ಟ ಕೇವಲ ೨೦ ಟಿಎಂಸಿ ನೀರಿದ್ದೂ, ಜಿಲ್ಲೆಯ ರೈತರ ಬೆಳೆ ಉಳಿಸಿಸಲು ನೀರು ಕೊಡುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ಕಾವೇರಿ ನೀರಾವರಿ ಪ್ರದೇಶದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಬೆಳೆ ಹನಿ ಬಗ್ಗೆ ಸರ್ವೆ ನಡೆಸಿ ವರದಿ ಪಡೆಯಬೇಕು ಎಂದು ಹೇಳಿದರು.
ರೈತರು ಜೋಳ ಬೆಳೆದಿದ್ದು, ಅವರ ಬಳಿ ದಲ್ಲಾಳಿಗಳು ೨ ಸಾವಿರಕ್ಕೆ ಖರೀದಿ ಮಾಡಿ ಕೆ.ಎಂ.ಎಫ್.ಗೆ ೨೫೦೦ಕ್ಕೆ ಮಾರಾಟ ಮಾಡುತ್ತಿದ್ದಾರೆ. ಹಬ್ಬ ಕಳೆದ ಮೇಲೆ ಜೋಳ ಖರೀದಿ ವಿಚಾರ ಮತ್ತು ಕೊಬರಿ ವಿಚಾರವಾಗಿಡಿಸಿ ಡಿಸಿ ಕಛೇರಿ ಮುಂದೆ ಹೋಗಿ ೨ ಸಾವಿರ ಹಿಡಿಗಾಯಿ ಹೊಡೆಯಲಾಗುವುದು.
ಈ ರಾಜ್ಯ ಸರಕಾರಕ್ಕೆ ಎಲ್ಲಾ ದೇವರುಗಳು ಬುದ್ದಿ ಕೊಡಪ್ಪ, ಈ ಕಳ್ಳರ ಕೈಗೆ ಸರಕಾರ ಸೇರಿದೆ ಎಂದು ಎಲ್ಲಾ ಪೂಜಾರಿಯನ್ನು ಕರೆಯಿಸಿ ಒಂದೊಂದು ದೇವರ ಹೆಸರು ಹೇಳಿ ಕಾಯಿ ಹೊಡೆಯಲು ತೀರ್ಮಾನ ಮಾಡಲಾಗಿದೆ ಎಂದು ಆಕ್ರೋಶವಾಗಿ ಹೇಳಿದರು.
ವಿಧಿ ಇಲ್ಲದೇ ಈ ಪರಿಸ್ಥಿತಿಗೆ ಬಂದಿದೆ ಎಂದು ಬೇಸರವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ಸಂಪರ್ಕ ಮುಚ್ಚಲು ಯಾರು ಹೇಳಿದ್ದು? ಇರುವ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದು, ಇದರಿಂದ ವಾಹನ ಸವಾರರು ನೇರವಾಗಿ ಬರುವ ಬದಲು ಜಿಲ್ಲಾ ಪಂಚಾಯಿತಿ ವರೆಗೆ ಬಳಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಬಂದರೇ ಅಲ್ಲೆ ನಿಂತುಕೊಂಡು ಬರಬೇಕು. ಆ ಜಾಗಕ್ಕೆ ಟ್ರಾಫೀಕ್ ಪೊಲೀಸ್ ಹಾಕಿ. ಖಸಿ ಬರಲು ಹೋಗಲು ಬೇಕಾದರೇ ವಿಶೇಷ ಪೊಲೀಸ್ ವಾಹನ ಹಾಕಲಿ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಡ್ಡಲಾಗಿ ಹಾಕಿರುವ ರಸ್ತೆ ತಡೆ ಶೀಘ್ರ ತೆರವು ಮಾಡದೆ ಇದ್ದರೆ ನಾನೇ ಮುಂದೆ ನಿಂತು ತೆರವು ಮಾಡಲಾಗುವುದು ಎಂದು ಎಚ್ಚರಿಸಿದರು.
