ಸಕಲೇಶಪುರ :-ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಎಂಬ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ಮಣ್ಣನ್ನು ಪ್ರತಿ ಗ್ರಾಮ , ತಾಲ್ಲೂಕು ಜಿಲ್ಲೆಗಳಲ್ಲಿ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ರವಾನೆ ಮಾಡುವ ಸಲುವಾಗಿ ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ನಮ್ಮ ದೇಶ ನಮ್ಮ ಮಣ್ಣು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪಟ್ಟಣದ ಪುರಭವನದವರೆಗೆ ಮೆರವಣಿಗೆ ಮಾಡಲಾಯಿತು. ನಂತರ ಪುರಭವನದಲ್ಲಿ ಮಾಜಿ ಸೈನಿಕರುಗಳಾದ ಕೇಶವಮೂರ್ತಿ ಹಾನುಬಾಳು, ಚಂದ್ರಶೇಖರ್ ಬಿರಡಹಳ್ಳಿ , ಎಚ್ ಪಿ ತಿಮ್ಮಯ್ಯ ಸಕಲೇಶಪುರ, ಉಮೇಶ್ ಆಚಂಗಿ ರಾಧಾಕೃಷ್ಣಪ್ಪ ಹಾರ್ಲೆ, ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯ ಅಧಿಕಾರಿಗಳಾದ ರಮೇಶ್ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾದ ರಾಮಕೃಷ್ಣ ಮತ್ತು ಹರೀಶ್ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಟಿಪಿ ಕೃಷ್ಣನ್ ಮತ್ತು ಪುರಸಭಾ ಸದಸ್ಯ ವನಜಾಕ್ಷಿ ಮತ್ತು ಇತರರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *