ಆಲೂರು : ಮುಂದಿನ ಜೀವ ಜೀವನದ ಭದ್ರತೆ ಗಾಗಿ ಪ್ರತಿಯೊಬ್ಬರು ವಿಮೆ ಪಾಲಿಸಿಯನ್ನು ಮಾಡಿಸುವಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಹಾಸನ ವಲಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ ವಿ ನವೀನ್ ತಿಳಿಸಿದರು.

ತಾಲ್ಲೂಕು ಹಂಚೂರು ಗ್ರಾಮ ಪಂಚಾಯಿತಿ ಕಾರ್ಯಲಯದ ಗ್ರಂಥಾಲಯದಲ್ಲಿ, ರಿಲಾಯನ್ಸ್ ಜನರಲ್ ಇನ್ಶೂರೆನ್ಸ್, ಹಂಚೂರು ಗ್ರಾ ಪಂ ಹಾಗೂ ತಾಲೂಕು ಆಸ್ಪತ್ರೆ ಇವರ ಸಹಯೋಗದಲ್ಲಿ ರಾಜ್ಯ ವಿಮಾ ಯೋಜನೆ ಅಡಿಯಲ್ಲಿ ವಿಮೆ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ನವೀನ್ ಮಾತನಾಡಿರಿಲಯನ್ಸ್ ಜನರಲ್ ಇನ್ಸೂರೆನ್ಸ್ ಯೋಜನೆಯಲ್ಲಿ ವಾಹನ ವಿಮೆ, ಆರೋಗ್ಯ ವಿಮೆ, ಬೆಳೆ ವಿಮೆ ಸೇರಿದಂತೆ ಹಲವಾರು ವಿಮ ಪಾಲಿಸಿಗಳು ಇದ್ದು, ಜನರು ಅನುಕೂಲತೆಗೆ ತಕ್ಕಂತೆ ಯೋಜನೆಗಳನ್ನು ಪಡೆದು ಕೊಳ್ಳಬಹುದು. ಅದರಲ್ಲೂ ರಿಲಯನ್ಸ್ ಹೆಲ್ತ್ ಗೇನ್ ಪಾಲಿಸಿಯು ಹೊಸದಾಗಿ ಪ್ಲಸ್, ಪವರ್ ಮತ್ತು ಪ್ರೈಮ್ ಎಂಬ ಮೂರು ಸಾಮರ್ಥ್ಯ ಶಾಲಿ ಪ್ಯಾಕ್ ಗಳಿಂದ ವಿಮೆಯ ಮೊಬಲಗಿಗಾಗಿ ಯಾವುದೇ ಬೆನಿಫಿಟ್ ಅನ್ನು ಆರಿಸಿಕೊಳ್ಳುವಲ್ಲಿ ಜನರಿಗೆ ಸಾಧ್ಯವಿದ್ದು, ಪ್ರತಿಯೊಬ್ಬರು ರಿಲಯನ್ಸ್ ಹೆಲ್ತ್ ಗೇನ್ ಪಾಲಿಸಿಯನ್ನು ರಿಲಯನ್ಸ್ ಜನರಲ್ ಇನ್ಸೂರೆನ್ಸ್ ನಲ್ಲಿ ಮಾಡಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಂಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಷಣ್ಮುಖ, ಗ್ರಾಮಸ್ಥ ವಿಜಯ್, ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷ ನವೀನ್ ಬೈರಾಪುರ, ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಸೇಲ್ಸ್ ಮ್ಯಾನೇಜರ್ ಕೆ ವಿ ನವೀನ್, ಬಿ ಸಿ ಶ್ರೀಧರ್, ಹೇಮರಾಜ್, ಕ್ಲೇಮ್ ಇನ್ಸ್ ಪೆಕ್ಟರ್ ಕಾಂತರಾಜು, ಅಭಿಷೇಕ್, ಭುವನೇಶ್, ನಂಜುಂಡೇಗೌಡ, ವಸಂತ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *