
ಹಾಸನ :- ಸಕಲೇಶಮರ ಗ್ರಾಮದ ಸರ್ವೆ.ನಂ. ೧೬೧ ರಲ್ಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿದ್ದು, ಕಂದಾಯ ಇಲಾಖೆಯ ಸರ್ಕಾರಿ ಜಾಗವನ್ನು ರಕ್ಷಣೆ ಮಾಡುವಂತೆ ಹೆಬ್ಬಸಾಲೆ ಗ್ರಾಮದ ಹೆಚ್.ಪಿ. ಚೇತನ್ ಶೆಟ್ಟಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಕಲೇಶಪುರ ಪುರಸಭಾ ಕಾರ್ಯಾಲಯದಲ್ಲಿ ಬಿ.ಎಸ್. ಶಿವದೇವಕುಮಾರ ಬಿನ್ ಲೇಟ್ ಚಿ.ಶಿವಪ್ಪ ಎಂಬುವರ ಹೆಸರಿನಲ್ಲಿ ಮರಸಭಾ ಖಾತೆ ನಂ. ೫೭೧೦/೧೯೯ರಲ್ಲಿ ೨೦ ಗುಂಟೆ ವಿಸ್ತೀರ್ಣದ ಜಾಗವನ್ನು ಹೊಂದಿರುತ್ತಾರೆ.
ಆದರೆ ಈ ಜಾಗಕ್ಕೆ ಹೊಂದಿಕೊಂಡಂತೆ ಕಂದಾಯ ಇಲಾಖೆಗೆ ಸೇರಿದ ೩-೧೬ ಎಕರೆ ವಿಸ್ತೀರ್ಣದ ಕೋಟ್ಯಾಂತರ ಮೌಲ್ಯದ ಜಮೀನಿರುತ್ತದೆ. ಆದರೆ ಬಿ.ಎಸ್. ಶಿವದೇವ ಕುಮಾರ್ ಮತ್ತು ಇವರ ಕುಟುಂಬಸ್ತರು ಕಂದಾಯ ಇಲಾಖೆಗೆ ಸೇರಿದ ಸ.ನಂ.೧೬೧ರ ೩-೧೬ ಎಕರೆ ವಿಸ್ತೀರ್ಣದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದಲ್ಲದೆ, ಈ ಜಾಗದಲ್ಲಿ ಸಕಲೇಶಪುರ ಪುರಸಭೆಯಿಂದ ಯಾವುದೇ ರೀತಿಯ ಪರವಾನಗೆ ಪಡೆಯದೆ, ಅಕ್ರಮವಾಗಿ ಅಂಗಡಿ ಮಳಗೆಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಿ, ತಿಂಗಳಿಗೆ ಲಕ್ಷಾಂತರ ರೂಪಾಯಿಗಳ ಬಾಡಿಗೆಯನ್ನು ಹೊಂದುತ್ತಿರುತ್ತಾರೆ ಎಂದರು.
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸ.ನಂ.೧೬೧ರ ೩-೧೬ ಎಕರೆ ವಿಸ್ತೀರ್ಣಕ್ಕೆ ಸಂಬಂಧಪಟ್ಟ ಪಹಣಿ ಪ್ರತಿಯು ಈಗಲು ಸಹ ಸರ್ಕಾರಿ ಗೋಮಾಳ ಎಂದು ಕಂದಾಯ ಇಲಾಖೆಯಲ್ಲಿ ಲಭ್ಯವಿರುತ್ತದೆ.
ಸಕಲೇಶಪುರ ಗ್ರಾಮದ ಸ.ನಂ.೧೬೧ರ ೩-೧೬ ಎಕರೆ ಜಮೀನು ಸಕಲೇಶಪುರ ಜನತೆಯ ನಿವೇಶನ ರಹಿತರಿಗೆ ಮತ್ತು ಇತರೆ ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾಗಿ ಬೇಕಾಗಿರುವುದರಿಂದ, ನಾನು ಈ ಹಿಂದೆ ಸಂಬಂಧಪಟ್ಟ ಕಛೇರಿಗೆ ಅರ್ಜಿ ಸಲ್ಲಿಸಿ, ಒತ್ತುವರಿ ಮಾಡಿರುವ ಕಂದಾಯ ಇಲಾಖೆಯ ಜಾಗ ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಮಳಗೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡ ಮೇರೆಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವುದು ದೃಢಪಟ್ಟ ಮೇರೆಗೆ ಸಕಲೇಶಪುರ ಪುರಸಭಾ ಕಾರ್ಯಾಲಯದ ತಾತ್ಕಾಲಿಕ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶ ಮಾಡಿ, ಆದೇಶದ ಪ್ರತಿಯನ್ನು ಬಿ.ಎಸ್. ಶಿವದೇವ ಕುಮಾರ್ ಮತ್ತು ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ರವರಿಗೆ ಮತ್ತು ದೂರುದಾರರಿಗೆ ಕಳುಹಿಸಿದ್ದರೂ ಸಹ, ಒಂದು ವರ್ಷ ಕಳೆದರೂ ಸಹ ಅನಧಿಕೃತ ಒತ್ತುವರಿದಾರರು ತೆರವುಗೊಳಿಸಿರುವುದಿಲ್ಲ ಎಂದು ದೂರಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ನನ್ನ ಅರ್ಜಿಯನ್ನು ಪರಿಗಣಿಸಿ, ಸ್ಥಳಪರಿಶೀಲನೆ ಮಾಡಿ, ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರವುಗೊಳಿಸಿ, ಕಂದಾಯ ಇಲಾಖೆಗೆ ಸೇರಿದ ಸ.ನಂ.೧೬೧ರ ೩-೧೬ ಎಕರೆ ಸರ್ಕಾರಿ ಗೋಮಾಳ ಜಮೀನನ್ನು ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆದು, ಸದರಿ ಜಾಗವನ್ನು ನಿವೇಶನ ರಹಿತರಿಗೆ ಹಾಗೂ ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಈ ಮೂಲಕ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟುಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಮೋಸ, ಪ್ರಾಣಾಪಾಯ, ನಷ್ಟವಾಗದಂತೆ ತಡೆಯುವುದು ಸಕಲೇಶಪುರ ಪುರಸಭೆಯ ಆಧ್ಯ ಕರ್ತವ್ಯವಾಗಿರುತ್ತದೆ.
ತಕ್ಷಣ ಈ ಮಳಿಗೆಗಳ ವ್ಯಾಪಾರ ವಹಿವಾಟುದಾರರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಪುರಸಭೆಯ ಯಾವುದೇ ದಾಖಲಾತಿಗಳಲ್ಲದೆ ಅನಧಿಕೃವಾಗಿ ನಿರ್ಮಾಣವಾಗಿರುವ ಎಲ್ಲಾ ಅಂಗಡಿ ಮುಂಗಟ್ಟುಗಳ ಬಾಗಿಲುಗಳನ್ನು ತಕ್ಷಣದಲ್ಲಿ ಮುಚ್ಚಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಒಂದು ವೇಳೆ ಈ ಅಂಗಡಿ ವ್ಯಾಪಾರ ವ್ಯವಹಾರದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದಲ್ಲ, ಅವುಗಳಿಗೆ ಸಕಲೇಶಪುರ ಪುರಸಭೆಯವರನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಎಚ್ಚರಿಸಿದರು.
ಸ.ನಂ.೧೬೧ರ ಸರ್ಕಾರಿ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ, ಹಿಡುವಳ ಜಮೀನೆಂದು ಸುಳ್ಳು ಹೇಳುತ್ತಿರುವ ಬಿ.ಎಸ್. ಶಿವದೇವ್ ಕುಮಾರರವರ ಕುಟುಂಬಸ್ಥರ ಬಳಿ ಈ ಜಮೀನು ಹಿಡುವಳ ಜಮೀನೆಂದು ದೃಢೀಕರಿಸಲು ದಾಖಲೆಗಳಿಲ್ಲದಿದ್ದಲ್ಲ, ಪುರಸಭೆಯಿಂದ ನೀಡಿರಬಹುದಾದ ಯಾವುದೇ ರೀತಿಯ ಅನುಮತಿ/ಪರವಾನಗಿಗಳನ್ನು ತಕ್ಷಣದಲ್ಲಿ ರದ್ದುಪಡಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ.
ಜಿಲ್ಲಾಧಿಕಾರಿಗಳು ಕೂಡ ನ್ಯಾಯ ಕೊಡಿಸಬೇಕು. ಒಂದು ವೇಳೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೇ ನಾನು ಕಾನೂನು ಹೋರಾಟವನ್ನು ಮುಂದುವರಿಸುವುದು ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು.
