
ಹಾಸನ :- ಗೋಬಿಮಂಚೂರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಮೂರ‍್ನಾಲ್ಕು ಜನರು ಕಲ್ಲು ಇಟ್ಟಿಗೆಯಿಂದ ಮನಸ್ಸೊ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ ರಸ್ತೆಯಲ್ಲಿಯೇ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆ ನಿವಾಸಿ ಕಾಂತರಾಜು (೪೫) ಎಂಬುವನೆ ಕೊಲೆಯಾದವನು.
ಸಾವನಪ್ಪಿರುವ ಇತ ಬೆತ್ತಲೆ ಸ್ಥಿತಿಯಲ್ಲಿ ಹಾಸನ – ಅರಸೀಕೆರೆಯ ಮುಖ್ಯ ರಸ್ತೆಯ ಬದಿ ಅಂಗಡಿಗಳ ಮುಂದೆ ಅನಾಥ ಶವವಂತೆ ಬಿದ್ದಿರೋ ಮೃತದೇಹವಾಗಿದೆ. ಕಾಂತರಾಜು ಕಾಟೀಹಳ್ಳಿ ಬಡಾವಣೆಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನು.
ಕಳೆದ ರಾತ್ರಿ ಸ್ನೇಹಿತರೊಂದಿಗೆ ಎಣ್ಣೆ ಕುಡಿದು ಗಲಾಟೆ ಮಾಡಿಕೊಂಡಿರುವ ಬಗ್ಗೆ ಕೇಳಿ ಬಂದಿದೆ. ಮೂವರು ಸೇರಿ ಹೊಡೆದು ಕೊಂದಿರೋ ಸಾಧ್ಯತೆ ಇದ್ದು, ಇಟ್ಟಿಗೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಮರ್ಡರ್ ಮಾಡಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಳೀಯ ನಿವಾಸಿ ವೇಣುಗೋಪಾಲ್ ಮಾಧ್ಯಮದೊಂದಿಗೆ ಮಾತನಾಡಿ, ಗಲಾಟಿ ನಡೆದು ನಂತರ ಕೊಲೆ ಆಗಿರುವ ಮಾಹಿತಿ ಬಂದಿದ್ದು, ನನಗೆ ಪೂರ್ಣ ಮಾಹಿತಿ ತಿಳಿದಿರುವುದಿಲ್ಲ. ಮೂಲತಃ ಅರಲಕಗೂಡು ನಿವಾಸಿ ಹಾಸನದಲ್ಲಿ ಗೋಬಿಮಂಚೂರಿ ಕೆಲಸ ಮಾಡುತ್ತಿದ್ದು, ಕೊಲೆಯಾದ ವ್ಯಕ್ತಿಯ ಬಟ್ಟೆ ಎಲ್ಲಾ ಎಸೆದು ಬೆತ್ತಲೆಗೊಳಿಸಿದ್ದಾರೆ. ಇದು ಮಾತ್ರ ಕೊಡಿದ ಅಮಾಲಿನ ಗಲಾಟಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.



