ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಮಹಾವಿದ್ಯಾಲಯ,ಕಾರೆಕೆರೆ, ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮೂರು ತಿಂಗಳು ಹಿರಿಸಮುದ್ರ ಹಳ್ಳಿಯಲ್ಲಿ ತಂಗಲಿದ್ದು, ಮೊದಲನೆಯ ದಿನ ತಮ್ಮ ಪರಿಚಯಾತ್ಮಕ ಕಾರ್ಯಕ್ರಮವನ್ನು ಗ್ರಾಮದ ರೈತರನ್ನು ಒಗ್ಗೂಡಿಸಿ ನೆರವೇರಿಸಿಕೊಂಡರು.

ರೈತರಿಗೆ ಸುಧಾರಿತ ಹಾಗು ಆಧುನಿಕ ಕೃಷಿ ಬಗ್ಗೆ ಮಾಹಿತಿ ತಿಳಿಸುವ ಬಗ್ಗೆ, ಹಾಗು ರೈತರಿಗಾಗಿ ಸರ್ಕಾರದಿಂದಿರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಕೊಡುವ ಬಗ್ಗೆ ಪ್ರತಿ ದಿನ ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ರೈತರಿಗೆ ತಿಳಿಸಿ, ಈ ಮೂರು ತಿಂಗಳ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ರೈತರ ಬೆಂಬಲ ಅತಿ ಮುಖ್ಯವೆಂದು ತಿಳಿಸಿ ಬೆಂಬಲ ನೀಡಲು ಮನವಿ ಮಾಡಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *