ಸಕಲೇಶಪುರ :-ತಾಲ್ಲೂಕಿನ ಯಸಳೂರು ಹೋಬಳ್ಳಿಯ ಮಾಗೇರಿ ಗ್ರಾಮದಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಉಡವನ್ನು ಬೇಟೆ ಆಡಿದ ಆರೋಪದ ಮೇಲೆ ಮೂವರನ್ನು ಯಸಳೂರು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮಾಗೇರಿ ಗ್ರಾಮದ ಬಾಲಸುಬ್ರಹ್ಮಣ್ಯ, ರಾಜೇಗೌಡ, ಕೊಡ್ಲಿಪೇಟೆ ನಾಗೇಶ್ ಕೆ ಎಂ ಮೇಲೆ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಉಡವನ್ನು ಬೇಟೆಯಾಡಿ ತಮ್ಮ ಮನೆಯಲ್ಲಿ ಮಾಂಸ ಬೇಯಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಜಿ ಆರ್ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಸಿಂಗಲ್ ಬ್ಯ್ರಾಲ್ ಬಂದೂಕು, 1.75 ಕೆಜಿ ಉಡದ ಮಾಂಸ ಹಾಗೂ ಬೇಟೆಗೆ ಉಪಯೋಗಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಅಧಿಕಾರಿ ಮಹಾದೇವ, ಎಂ ಎಸ್ ಉಪ ವಲಯ ಅರಣ್ಯ ಅಧಿಕಾರಿ ವಿಜಯ್ ಕುಮಾರ್, ಸೋಮಶೇಖರ್, ಗಸ್ತು ಅರಣ್ಯ ಪಾಲಕರಾದ ನವೀನ್ ಕುಮಾರ್ ಎಸ್ಆರ್, ದಯಾನಂದ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *