ಹಾಸನ : ವಿದ್ಯಾರ್ಥಿನಿ ಮಾನ್ಯ ಅವರ ಸಾವಿನ ತಾರ್ಕಿಕ ಅಂತ್ಯ ನೀಡಬೇಕು ಹಾಗೂ ಸೂಕ್ತ ರೀತಿಯ ನಿಷ್ಪಕ್ಷಪಾತ ತನಿಕೆ ನಡೆಯಬೇಕೆಂದು ಆಗ್ರಹಿಸಿ ಮತ್ತು ಕಾಲೇಜು ಆಡಳಿತ ಮಂಡಳಿ ಸೂಕ್ತ ರೀತಿಯ ನ್ಯಾಯ ನೀಡಲೇಬೇಕೆಂದು ಎಬಿವಿಪಿ ನೇತೃತ್ವದಲ್ಲಿ ನಗರದ ಹೊರವಲಯ ಬೈಪಾಸ್ ರಸ್ತೆಯಲ್ಲಿರುವ ರಾಜೀವ್ ಕಾಲೇಜು ಮುಂದೆ ವಿದ್ಯಾರ್ಥಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಪ್ರತಿಕ್ರಿಯೆ ನಿಡಿದ ಕಾಲೇಜು ಪ್ರಾಂಶುಪಾಲ ಶಂಕರೆಗೌಡ ಮಾತನಾಡಿ, ಎಬಿವಿಪಿ ಸಂಘಟನೆ ಬಗ್ಗೆ ಗೌರವವಿದೆ ಮತ್ತು ಸಾವಿನ ವಿಚಾರವಾಗಿ ತನಿಖೆಗೆ ಸ್ಪಂದಿಸುತ್ತೇವೆ ಎಂದರು.

ಕುಟುಂಬಕ್ಕೆ ಸೂಕ್ತರೀತಿಯ ನ್ಯಾಯ ದೊರೆಯುವಂತೆ ಮಾತಾಡುತ್ತೇವೆ ಮತ್ತೆ ಯಾವುದೇ ಅವಗಡಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿ ಸಮೂಹಕ್ಕೆ ಸೂಕ್ತ ನ್ಯಾಯ ದೊರೆಯಬೇಕು ಮತ್ತು ನಿಷ್ಪಕ್ಷಪಾತ ತನಿಕೆ ನಡೆಸಬೇಕು ಕಾಲೇಜು ಆಡಳಿತ ಮಂಡಳಿಯು ಮತ್ತೆ ಯಾವುದೇ ಅವಗಡ ಆಗದಂತೆ ಕ್ರಮಕೈಗೊಳ್ಳುತ್ತೇವೆ ಮತ್ತು ಮಾನ್ಯ ಅವರ ಸಾವಿಗೆ ಸೂಕ್ತ ನ್ಯಾಯ ನೀಡುತ್ತೇವೆ ಎಂದು ತಿಳಿಸಿದರು.

ಈ ಹೋರಾಟವನ್ನು ಇಲ್ಲೆಗೆ ಕೈಬಿಡಬೇಕೆಂದು ಮನವಿ ಮಾಡಿಕೊಂಡಿದ್ದರೆ.

ಮನವಿ ಮೆರೆಗೆ ಈ ಹೋರಾಟವನ್ನು ಸ್ಥಗಿತಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಮತ್ತು ಹಿರಿಯ ಕಾರ್ಯಕರ್ತರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *