ಅರೇಹಳ್ಳಿ :- ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ, ಸಂಯುಕ್ತ ಆಶ್ರಯದಲ್ಲಿ ಕಾಳು ಮೆಣಸಿನ ವಿಚಾರ ಸಂಕಿರಣ ವನ್ನು ಸೋಮವಾರ ಮಲಸವರ ಪಂಚಾಯಿತಿಯ ಕಾನಹಳ್ಳಿಯ ಪ್ರಗತಿಪರ ಮೆಣಸು ಬೆಳೆಗಾರ ರಂಜನ್ ಅವರ ಕಾನಹಳ್ಳಿ ಎಸ್ಟೇಟ್ ನಲ್ಲಿ ನೆಡೆಸಲಾಯಿತು.

ಕಾರ್ಯಕ್ರಮ ದಲ್ಲಿ ICAR ನಿರ್ದೇಶಕರು ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಸ್ಪೈಸಸ್ ರಿಸರ್ಚ್ ನ ಹಿರಿಯ ವಿಜ್ಞಾನಿ ಡಾ. ಅಂಕೆಗೌಡ ಕಾಳು ಮೆಣಸಿನ ಬಗ್ಗೆ ಮಾಹಿತಿ ಕೊಡುವ ಜೊತೆಗೆ ಬೆಳೆಗಾರರೊಂದಿಗೆ ಕಾಳು ಮೆಣಸಿನ ಬಗ್ಗೆ ವಿಚಾರ ಸಂಕಿರಣ ಮಾಡಿದ್ದರು.

ಅವರು ಬೆಳೆಗಾರರೊಂದಿಗೆ ಕಾಳು ಮೆಣಸು ಬಗ್ಗೆ ವಿಚಾರ ವಿನಿಮಯ ಮಾಡುತ್ತಾ “ಕಾಳು ಮೆಣಸಿನ ಬಳ್ಳಿಯ ಎಲೆಗಳು ಕೊಳೆರೋಗ ಬಾಧಿತವಾಗಿದ್ದರೆ ತಕ್ಷ ಣ ಶೇ. 0.1 ಮೆಟಾಲಾಕ್ಸಿಲ್‌ ಮತ್ತು ಮಾನ್ಕೊಜೆಬ್‌ ಔಷಧವನ್ನು ವಿಶ್ರಣ ಮಾಡಿ ಸಿಂಪಡಿಸಬೇಕು.

ಮಳೆ ಬರುವ ಮುನ್ನಾ ಪ್ರತಿ ತಿಂಗಳು ಬಳ್ಳಿಗಳಿಗೆ ಸುಮಾರು 50 ಲೀ. ನೀರು ಕೊಡಬೇಕು .ಅಲ್ಲದೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನೆರಳನ್ನು ಕಾಯ್ದುಕೊಳ್ಳಬೇಕು. ಚಿಕ್ಕ ಬಳ್ಳಿಗಳಿಗೆ ಹಳದಿ ರೋಗ ಬಾರದಂತೆ ಶೇ. 3ರ ಸುಣ್ಣ ದ್ರಾವಣ ಸಿಂಪಡಿಸಬೇಕು.

ಅಧಿಕ ಇಳುವರಿ ನೀಡುವ ಬಳ್ಳಿಗಳು ನೀರಿನ ಅಭಾವದಿಂದ ಸೊರಗುವುದನ್ನು ತಡೆಯಲು ರಕ್ಷ ಣಾತ್ಮಕ ನೀರಾವರಿ ಸೌಲಭ್ಯ ಒದಗಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಮೆಣಸು ಬೆಳೆಗಾರ ರಂಜನ್ ಮಾತನಾಡಿ “ನಮ್ಮ ತೋಟದಲ್ಲಿ ಮೆಣಸು ವಿಚಾರ ಸಂಕಿರಣ ಆಯೋಜಿಸರುವುದು ಖುಷಿಯ ವಿಚಾರ.

ನಾನು ಸುಮಾರು ವರ್ಷಗಳಿಂದ ಕಾಳು ಮೆಣಸು ಉತ್ಪದನೆಯಲ್ಲಿ ಖುಷಿಪಡುವ ಮಟ್ಟಕ್ಕೆ ಯಶಸ್ಸು ಕಂಡಿದ್ದೀನಿ.ಬೆಳೆಗಾರರು ಉತ್ತಮ ಫಸಲನ್ನು ಪಡೆಯಲು ತಜ್ಞರ ಸಲಹೆ ಪಡೆದುಕೊಂಡು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹಣ ಉಳಿತಾಯ ಜೊತೆಗೆ ಹೆಚ್ಚು ಇಳುವರಿ ಪಡೆದುಕೊಳ್ಳಭಾವುದು.”ಎಂದು ಅಭಿಪ್ರಾಯ ಪಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *