ಆಲೂರು : ಇಡೀ ಜಗತ್ತು ಧ್ಯಾನ ಸಸ್ಯಹಾರ ಹಾಗೂ ಪಿರಮಿಡ್ ಜಗತ್ತಾಗಬೇಕೆಂದು ಕರ್ನಾಟಕ ಪತ್ರೀಜಿ ಮೂವ್ ಮೆಂಟ್ ಸಂಸ್ಥಾಪಕ ಅಧ್ಯಕ್ಷೆ ಸುಮಂಗಳ ಸಾಲಿಮಠ್ ತಿಳಿಸಿದರು.

ಪಟ್ಟಣದ ಮುಖ್ಯ ಬೀದಿಯಲ್ಲಿ ಸಸ್ಯಹಾರ ಕುರಿತ ಜಾಗೃತಿ ಜಾಥಾ ಕುರಿತು ಮಾತನಾಡಿದರು.

ಪ್ರತಿ ವರ್ಷ ನವಂಬರ್ ಒಂದರಿಂದ 11ನೇ ತಾರೀಖಿನವರೆಗೆ ನಮ್ಮ ಸಂಸ್ಥೆಯ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರಪಂಚದ ಕಟ್ಟ ಕಡೆಯ ಮಾಂಸಹಾರಿ ಕೂಡ ಸಸ್ಯಹಾರಿಯಾಗ ಬೇಕೆನ್ನುವುದು ನಮ್ಮ ಮುಖ್ಯ ಉದ್ದೇಶ

ಇಂದು ಸಂಜೆ 4:00ಗೆ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ವಿದ್ದು ಜಾತಿಭೇದವಿಲ್ಲದೆ ಎಲ್ಲಾ ಸಾರ್ವಜನಿಕರು ಆಗಮಿಸಿ, ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕೆಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *