
ಬೇಲೂರು : ಬಿಸಿಲ ತಾಪಕ್ಕೆ ಹೊತ್ತಿ ಉರಿದ ಕಾರು:ನಗರದ ಕೆಂಪೇಗೌಡ ವೃತ್ತದ ಬಳಿ ನಿಲ್ಲಿಸಿದ್ದ ಬೇಕರಿ ಮಾಲೀಕ ಸೋಮ ಶೇಖರ್ ಎಂಬುವರಿಗೆ ಸೇರಿದ, ಕೆಎ 35.M 8840 ನಂಬರಿನ ಕಾರು ಎರಡು ಗಂಟೆಗಳ ಕಾಲ ನಿಂತಿದ್ದ ಬಿಸಿಲ ತಾಪದಿಂದ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಟೌನ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ತಕ್ಷಣ ಸ್ಥಳಿಯರು ಬಕೇಟ್ ನಿಂದ ನೀರು ಎರಚಿ ಬೆಂಕಿ ನಂದಿಸಲು ಸಹಕರಿಸಿದರು.
ಕೂಡಲೆ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಸಹಕಾರಿಯಾದರು.


