
ಹಾಸನ: ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಲ್ಲಿ ಕ್ರೀಡೆಯಲ್ಲಿ ಇರುವಷ್ಟು ಆಸಕ್ತಿ ಶಿಕ್ಷಣದ ಓದುವಿನಲ್ಲೂ ಕೂಡ ಮುಂದಾಗಬೇಕೆಂದು ಎಂದು ರಾಜ್ಯ ಮಟ್ಟದ ಕ್ರೀಡೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹಾಕಿ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ, ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಮತ್ತು ಟೈಮ್ಸ್ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕಾಲ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳು ಉತ್ತಮ ಆಟವನ್ನು ಆಡಬೇಕು. ಕ್ರೀಡೆಯಲ್ಲಿ ಎಷ್ಟೊ ಖಷಿಯಾಗಿ ಭಾಗವಹಿಸುತ್ತೀರಾ ಓದುವಿನಲ್ಲೂ ಕೂಡ ಅಷ್ಟೆ ಮುಂದಾಗಬೇಕು.
ಸರಕಾರವು ಕೂಡ ಸಾಧನೆ ಮಾಡಿದ ಕ್ರೀಡಪಟುವಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾಗಿಟ್ಟಿದೆ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರೇ ಮುಂದಿನ ಭವಿಷ್ಯ ಅದರಲ್ಲೆ ರೂಪಿಸಿಕೊಳ್ಳಬಹುದು ಎಂದರು.
ಇತ್ತಿಚಿಗೆ ನಡೆದ ಏಷ್ಯನ್ ಗೇಮ್ ನಲ್ಲಿ ಸೆಂಚುರಿಯನ್ನು ಪದಕದಲ್ಲಿ ಭಾರತವು ಮುಟ್ಟಿದೆ. ಪ್ರಸ್ತುತದಲ್ಲಿ ಕ್ರೀಡೆಯೊಳಗೆ ಸಾಕಷ್ಟು ಬೆಳೆವಣಿಗೆಯನ್ನು ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ಕ್ರೀಡಾಮನೋಭಾವದಲ್ಲಿ ಮೆರೆಯಬೇಕು. ಸಣ್ಣಬುದ್ದಿ, ಕೊಕ್ಕುಬುದ್ದಿ ಅಡ್ಡದಾರಿ ಹೋಗಿ ಸಾಧನೆ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.
ಕ್ರೀಡೆಯಲ್ಲಿ ಸಾಧನೆ ಮಾಡುವಾಗ ಕಲಿಕೆಯ ಸಾಧನೆ ಪ್ರದರ್ಶಿಸಬೇಕೆ ಹೊರತು ಅಡ್ಡದಾರಿಯಿಂದ ಪಡೆದ ಗೆಲುವು ಶಾಶ್ವತವಲ್ಲ. ಮೋಸ ಮಾಡಿದ ಬಗ್ಗೆ ಮನಸ್ಸಿನಲ್ಲಿ ಕೊರೆದು ಮಾನಸಿಕ ನೆಮ್ಮದಿ ಆಳು ಮಾಡಿಕೊಳ್ಳಬೇಕಾಗುತ್ತದೆ.
ಇಂತಹ ನಡೆಗೆ ಯಾರು ಅವಕಾಶ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು. ನಾನು ಸರಕಾರಿ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿನಿ. ಟೀಚರ್ಸ್ ಅವರ ಮನಸ್ಸಿನಲ್ಲಿ ಉಳಿಯಬೇಕಾದರೇ ವಿದ್ಯಾರ್ಥಿಗಳು ಅಷ್ಟೊಂದು ಪರಿಣಾಮ ಬೀರಬೇಕು. ನಾವು ಮಾಡುವ ಒಳ್ಳೆ ಕೆಲಸಗಳಲ್ಲಿ ಶಾಶ್ವತವಾಗಿ ನೀವು ಉಳಿಯಬಹುದು ಎಂದು ತಮ್ಮ ಜೀವನದ ಬಾಲ್ಯದ ನೆನಪುಗಳನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ಮೆಲುಕು ಹಾಕಿದರು.
ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ ಕ್ರೀಡಾಕೂಟದಲ್ಲಿ ಮೊದಲು ಧ್ವಜಾರೋಹಣ ಮಾಡಲಾಯಿತು. ನಂತರ ನಾಡಗೀತೆ ಹಾಡಿದರು. ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು. ತಂಡಗಳ ಪರಿಚರ ಮಾಡಿಕೊಂಡರು.
ಇದಾದ ಮೇಲೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೆ ವೇಳೆ ನೃತ್ಯ ರೂಪಕ ನಡೆಸಿದ ವಿದ್ಯಾರ್ಥಿಗಳು ಗಮನಸೆಳೆದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿಂಧೂ ಬಿ. ರೂಪೇಶ್, ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್, ಸಂಸ್ಥೆಯ ಅರ್ಜುನ್, ಕ್ರೀಡಾ ಸಂಯೋಜಕ ಉಪನ್ಯಾಸಕ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.






