ಹಾಸನ: ನಗರದ ಎಂಜಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಸೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ, ಎನ್.ಎಸ್.ಎಸ್, ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ೫೦ರ ಸಂಭ್ರಮದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಪ್ರತಿಕೋದ್ಯಮ ವಿಭಾಗದ ಮಂಜುಳ ಸಿ. ಎಸ್ ಇವರ ಸಹಯೋದೊಂದಿಗೆ ಕಾಲೇಜ್ ನಿವ್ಸ್ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಹಾಸನದ ಹೇಮಾ ಗಂಗೋತ್ರಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ .ಡಾ. ಎಂ.ಶಂಕರ್ರವರು ಹಾಗು ವಿಶೇಷ ಸನ್ಮನಿತರಾದ ವಿದುಷಿ ಅಂಬಳೆ ರಾಜೇಶ್ವರಿ ಅವರು ಕಾರ್ಯಕ್ರಮದ ಹಾಗೂ ಕನ್ನಡ ನಾಡು ನುಡಿಯ ಕುರಿತು ಸ್ತ್ರೀ ಶಕ್ತಿ ಬಹಳ ಅಪಾರವಾದುದು ನಮ್ಮ ಗೌರವ ನಾವೇ ಪಡೆದುಕೊಳ್ಳಬೇಕು ಭರತನಾಟ್ಯ ನಮಗೆ ಜೀವ ಜೀವನ ಕೌಶಲ್ಯಗಳನ್ನು ತಂದು ಕೊಡುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ ಎಚ್ಪಿ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.

ಇದೆ ವೇಳೆ ಹಾಸನ ಹೇಮಗಂಗೋತ್ರಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ ಎಂ ಶಂಕರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಶ್ರೀಮತಿ ಅಂಬಾಳೆ ರಾಜೇಶ್ವರಿ ಅವರು, ಡಾ ಪ್ರಾಂಶುಪಾಲರಾದ . ಪೂರ್ಣಿಮ ಹೆಚ್.ಪಿ. ಕಾಲೇಜಿನ ಬೋಧಕ ವರ್ಗ, ಬೋಧಕೇತರ ವರ್ಗ, ಕಚೇರಿ ಸಿಬ್ಬಂದಿಗಳು ಸಿಡಿಸಿಸ್ ನೌಕರರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *