
ಹಾಸನ: ಅದಿ ದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆಗೆದು ೮ನೇ ದಿನದಲ್ಲಿ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದ್ದು, ನಿಯಂತ್ರಣ ಮಾಡುವಲ್ಲಿ ಪೊಲೀಸರು ವಿಫಲರಾದರು.
ಕಣ್ಣೆದುರೆ ಕಂಡು ಜಿಲ್ಲಾಧಿಕಾರಿ ಸತ್ಯಭಾಮ ಅವರು ಕೂಡ ಕೈಲಿ ಮೈಕು ಹಿಡಿದು ಭಕ್ತಾಧಿಗಳಲ್ಲಿ ಮನವಿ ಮಾಡುತ್ತಿದ್ದರು.
ಕಳೆದ ಒಂದು ವಾರದಿಂದ ಹಾಸನಾಂಬೆ ದೇವಾಲಯಕ್ಕೆ ಭಕ್ತರು ಬಂದು ದರ್ಶನ ಮಾಡಿಕೊಂಡು ಹೋಗುತ್ತಿದ್ದು, ಆದರೇ ಅಷ್ಟೊಂದು ರಶ್ ಕಾಣಿಸಲಿಲ್ಲ. ಪೊಲೀಸರು ಕೂ ಅರಮಾಗಿಯೇ ಇದ್ದರು.
ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ದಿನಗಳು ಹತ್ತಿರವಾಗುತ್ತಿದ್ದಂತೆ ಸಾರ್ವಜನಿಕರ ಹೆಚ್ಚಳ ಕಾಣಿಸಿದೆ. ಗುರುವಾರದಂದು ಬೆಳಗಿನಿಂದಲೇ ಭಕ್ತರ ದಂಡು ಆಗಮಿಸಿತು.
ಸಾವಿರ ರೂ ಕೊಟ್ಟು ಬರುವ ಭಕ್ತರ ಸಂಖ್ಯೆಯಲ್ಲೂ ಕೂಡ ಏರಿಕೆ ಕಂಡು ಬಂದಿತು. ಒಂದು ಸಾವಿರ ರೂ ಹಣ ಕೊಟ್ಟು ನೇರ ದರ್ಶನ ಮಾಡುವವರು ಕೂಡ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಇದೆ ವೇಳೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಇನ್ನು ವಿವಿಐಪಿ ಪಾಸ್ ಹೊಂದಿರುವವರ ಸಂಖ್ಯೆಯಂತು ತೀವ್ರ ಹೆಚ್ಚಳ ಕಾಣಿಸಿತು. ಪ್ರತಿಯೊಬ್ಬರ ಕೈಲು ಪಾಸ್ ಇತ್ತು.
ಜೊತೆಗೆ ಪೊಲೀಸ್ ಕಡೆಯವರು, ಕಂದಾಯ ಇಲಾಖೆ ಕಡೆಯವರು ದೇವಾಲಯದ ಒಳಗೆ ಪ್ರವೇಶ ಮಾಡುವವರ ಸಂಖ್ಯೆಯು ಹೆಚ್ಚು ಇತ್ತು. ಪೊಲೀಸರು ಚೌಡೇಶ್ವರಿ ದೇವಾಲಯದ ಬಳಿ ಬ್ಯಾರಿಕೇಡ್ ಹಾಕಿ ನಿಯಂತ್ರಿಸುತ್ತಿದ್ದರು.
ಆಗೇ ಬೇಕಾದವರನ್ನು ಒಳ ಕರೆದುಕೊಳ್ಳುತ್ತಿದ್ದರು. ಇದನ್ನೆಲ್ಲ ಗಮನಿಸಿದ ಭಕ್ತರ ಪ್ರವಾಹವು ಒಳ ಪ್ರವೇಶ ಮಾಡಲು ನೂಕಾಡಿದರು. ಇವರನ್ನು ತಡೆಯುವಲ್ಲಿ ಪೊಲೀಸ್ ವಿಫಲವಾಗಿ ಒಳ ನುಗ್ಗಿದರು.
ನಂತರ ಮತ್ತೊಂದು ಬ್ಯಾರಿಕೇಡ್ ನಲ್ಲಿ ತಡೆದರೂ ಪ್ರವಾಹದಂತೆ ಬಂದಿದ್ದ ಭಕ್ತರ ಮುಂದೆ ಪೊಲೀಸರ ಶಕ್ತಿ ಯಾವ ಪ್ರಯೋಜನಕ್ಕೆ ಬರಲಿಲ್ಲ. ಆದರೇ ಸಾವಿರ ರೂ ಕೊಟ್ಟವರು ದೇವಸ್ಥಾನದ ಒಳಕ್ಕೆ ಹೋಗಲು ಬೇಡ ಬೇಕಾಯಿತು. ಆಗೇ ಪೊಲೀಸರಿಂದ ನೂಕಿಸಿಕೊಳ್ಳಬೇಕಾಯಿತು.





