
ಸಕಲೇಶಪುರ :- ತಾಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಶುಕ್ರವಾರ ಸಂತೆ ಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಶಾಲಾ ಮಕ್ಕಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿಗಳು ವಿವಿಧ ರೀತಿಯ ಛದ್ಮ ವೇಷ ತೊಟ್ಟು ಶುಕ್ರವಾರ ಸಂತೆಯ ಮುಖ್ಯ ಬೀದಿಯಲ್ಲಿ ಪಥ ಸಂಚಾಲನೆ ನಡೆಸಿದರು.
ಶಾಲಾ ಮಕ್ಕಳ ಯಕ್ಷಗಾನ, ಡೊಳ್ಳುಕುಣಿತ, ವೀರಗಾಸೆ, ಹುಲಿವೇಶ, ಕಾಡುಜನರವೇಷ, ಲಂಬಾಣಿನೃತ್ಯ, ನವಿಲುಕುಣಿತ, ಹಾಲಕ್ಕಿ ನೃತ್ಯ,ಕಂಸಾಳೆ ಕುಣಿತ ನೆರೆದಿದ್ದವರ ಮನಸುರೆಗೋಡವು.
ಒಟ್ಟಾರೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







