
ಹಾಸನ : ತಾಲ್ಲೂಕಿನ ಶಾಂತಿ ಗ್ರಾಮ ಹೋಬಳಿಯ ಅಂಬುಗ ಗ್ರಾಮದಲ್ಲಿ ಶ್ರೀ ರಂಭಾದೇವಿ ಆಲಯ ನವೀಕರಣ ಜೀರ್ಣೋದ್ಧಾರ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮವು ನಡೆಯಿತು.
ಶ್ರೀ ಸೌಮ್ಯಕೇಶವ ದೇವಸ್ಥಾನದಲ್ಲಿ ಇರುವ ಶ್ರೀ ರಂಭಾದೇವಿಯನ್ನು ಅದ್ದೂರಿಯಾಗಿ ಸುತ್ತಮುತ್ತಲ ಗ್ರಾಮಸ್ಥರು ಸೇರಿ ರಕ್ಷಾ ಬಂಧನ ಪೂಜೆ ಅಗ್ನಿ ಪ್ರತಿಷ್ಠೆ ಇನ್ನೂ ಅನೇಕ ವಿಧಿ ವಿಧಾನಗಳೊಂದಿಗೆ ಕಳಸ ಪ್ರತಿಷ್ಠೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಮಹಿಳೆಯರು ಹೆಣ್ಣು ಮಕ್ಕಳು ಗಂಗೆ ಪೂಜೆ ಕಳಸವನ್ನು ತರುವುದರ ಮೂಲಕ ಪೂಜಾ ಕಾರ್ಯಕ್ರಮ ಯಶಸ್ಸು ಗೊಳಿಸಿದರು.






