ಸಕಲೇಶಪುರ : ಯಾವ ಕ್ಷೇತ್ರದಲ್ಲಿ ಸರ್ಕಾರಗಳು ಕೆಲಸ ಮಾಡಲು ವಿಫಲವಾಗಿದೆಯೋ ಅಲ್ಲಿ ಸ್ವಸಹಾಯ ಸಂಘಗಳು ಉತ್ತಮ ರೀತಿಯ ಕೆಲಸವನ್ನು ಮಾಡಿ ಶ್ಲಾಘನೀಯ ಸ್ಥಾನದಲ್ಲಿ ನಿಂತಿವೆ.

ಇದರಿಂದ ದೇಶದ ಭವಿಷ್ಯವೂ ಬದಲಾವಣೆಯಾಗುತ್ತಿದೆ. ಹಾಗಾಗಿ ಈ ಸ್ವ ಸಹಾಯ ಸಂಘಗಳು ಇನ್ನೂ ಹೆಚ್ಚಿನ ಮಟ್ಟಿಗೆ ಬೆಳೆದಾಗ ಕೇವಲ ಸಂಘಗಳಲ್ಲದೆ ದೇಶದ ಆರ್ಥಿಕತೆ ಇನ್ನಷ್ಟು ಉನ್ನತ ಸ್ಥಾನಕ್ಕೆ ಹೋಗುತ್ತದೆ.

ಇಂದು ತೆಂಕಲಗೂಡು ಬ್ರಹನ್ಮಠದ ಶ್ರೀ ಷ. ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ )ಸಕಲೇಶಪುರ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಶುಕ್ರವಾರ ಸಂತೆ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಳಲಹಳ್ಳಿ ಕೂಡಿಗೆಯ ಎಚ್.ಡಿ ದೇವೇಗೌಡ ಸಮುದಾಯ ಭವನದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಏರ್ಪಡಿಸಲಾಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ತೆಂಕಲಗೂಡು ಬ್ರಹನ್ಮಠದ ಶ್ರೀ ಷ. ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಕೈಗೊಂಡಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಹಾಗೂ ಅದರಿಂದ ಲಕ್ಷಾಂತರ ಮಹಿಳೆಯರು ತಮ್ಮ ಜೀವನವನ್ನು ಕಟ್ಟಿಕೊಂಡಿರುವ ಬಗ್ಗೆ ವಿವರಿಸುತ್ತಾ ” ಹೆಣ್ಣು ಮಕ್ಕಳು ಸ್ವಾವಲಂಬನೆ ಜೀವನ ನಡೆಸಬೇಕು ಎಂಬ ವೀರೇಂದ್ರ ಹೆಗಡೆಯವರ ಮಹತ್ವಕಾಂಕ್ಷೆಯಿಂದ ಸ್ಥಾಪನೆಯಾದ ಈ ಯೋಜನೆಯು ಇಂದು ರೈತರಿಂದ ಹಿಡಿದು ದೇವಸ್ಥಾನದವರೆಗೂ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಚಾಪನ್ನು ಮೂಡಿಸಿದೆ.

ಇದರಿಂದ ಎಷ್ಟು ಹಳ್ಳಿಗಳ ಹೆಣ್ಣು ಮಕ್ಕಳು ಶಿಕ್ಷಣದ ಜೊತೆಗೆ ತಾವು ಸ್ವಾವಲಂಬಿ ಜೀವನ ಸಾಗಿಸಲು ದಾರಿದೀಪವಾಗಿದ್ದಾರೆ.

ಸಂವಿಧಾನ ಎಲ್ಲೋ ಒಂದು ಕಡೆ ಎಡವಿರಬಹುದು ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತಾದಿಗಳಿಗೆ ನಂಬಿದವರಿಗೆ ಎಂದು ಕೈ ಬಿಟ್ಟಿಲ್ಲ.ಅದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತ ಬಂದಿದೆ . ಸಮಾಜಮುಖಿ ಕೆಲಸಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ವೀರೇಂದ್ರ ಹೆಗಡೆಯವರ ಕುಟುಂಬದವರನ್ನು ಈ ಸಂದರ್ಭದಲ್ಲಿ ನಾವು ನೆನೆಸಿಕೊಳ್ಳಬೇಕು.ಜೊತೆಗೆ ಯಾವಾಗ ದೇಶದ ಆದಾಯ ಸದೃಢವಾಗಿರುತ್ತದೆ ಆಗ ಸರ್ಕಾರವನ್ನು ಪ್ರಜೆಗಳು ದೂರವ ಪ್ರಮಾಯವೇ ಬರುವುದಿಲ್ಲ. ಅಂತಹ ಕೆಲಸದತ್ತ ಸಾಗುತ್ತಿರುವ ಈ ಸ್ವ ಸಹಾಯ ಸಂಘಕ್ಕೆ ಶುಭವಾಗಲಿ.

ಸತ್ಯನಾರಾಯಣ ಪೂಜೆ ಮಾಡಿರುವ ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಉಂಟಾಗಲಿ.ಅದರಿಂದ ಬರುವ ಲಾಭಗಳು ನಿನ್ನಷ್ಟು ಊರಿನ ಅಭಿವೃದ್ಧಿಗೆ ಮುಡಿಪಾಗಿರುವಂತಗಲಿ. ಹಾಗಾಗಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಧರ್ಮಸ್ಥಳ ಸ್ವಸಹಾಯ ಸಂಘಕ್ಕೆ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳುವಂತಾಗಲಿ.”ಎಂದು ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾಮೂಹಿಕ ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ನಾಗೇಶ್ ರವರು ವಹಿಸಿದ್ದರು. ತಾಲೂಕಿನ ಅದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ತಮ್ಮ ಕುಟುಂಬ ಸಮೇತ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ, ನಂತರ ಶ್ರೀಗಳ ಪ್ರವಚನ ಕೇಳಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಸನ ಜಿಲ್ಲೆಯ ನಿರ್ದೇಶಕರಾದ ಮಮತಾ ಹರೀಶ್ ರಾವ್,ಹೆತ್ತೂರು ಕುಮಾರ ಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯಮೂರ್ತಿ, ಸ್ವಸಹಾಯ ಮತ್ತು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಶುಕ್ರವಾರ ಸಂತೆ ವಲಯದ ಅಧ್ಯಕ್ಷರಾದ ನಾಗೇಶ್ (ಕೆರೆಮನೆ ),ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕರಡಿಗಾಲ ಕೃಷ್ಣೆಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇ ಗೌಡ, ಪುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಳಲಹಳ್ಳಿ ವಸಂತ್,ಯೋಜನಾಧಿಕಾರಿಗಳಾದ ಪುರುಷೋತ್ತಮ್, ಶುಕ್ರವಾರ ಸಂತೆ ವಲಯದ ಮೇಲ್ವಿಚಾರಕರಾದ ಧನಂಜಯ್ ಹಾಗೂ ಎಲ್ಲಾ ಸೇವಾ ಪ್ರತಿನಿಧಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *