
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಬೆಳೆ ವಿಮೆ* ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು
ಇದರಲ್ಲಿ ರೈತರ ವಿವಿಧ ಉತ್ಪಾದನಾ ಅಪಾಯಗಳಿಂದಾಗಿ ತಮ್ಮ ಬೆಳೆ ನಷ್ಟ ಮತ್ತು ಬೆಳೆ ನಾಶದಿಂದಾಗುವ ಆರ್ಥಿಕ ಸಂಕಷ್ಟವನ್ನು ಕಡಿಮಗೊಳಿಸುವ ಗುರಿಯನ್ನು ತಿಳಿಸಲಾಯಿತು.
ಪ್ರಮುಖ ಬೆಳೆ ವಿಮಾ ಯೋಜನೆಯಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಡಿಯಲ್ಲಿ ಒಳಗೊಳ್ಳುವ ಅಪಾಯಗಳು, ಪ್ರಮುಖ ಗುಣಲಕ್ಷಣಗಳು, ರೈತರು ಪಾವತಿಸಬೇಕಾದ ಪ್ರೀಮಿಯಂ ದರಗಳು, ವಿವಿಧ ಬೆಳೆಗಳಿಗೆ ನಿಗಧಿ ಪಡಿಸಲಾಗಿರುವ ವಿಮೆ ಕಂತಿನ ದರಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಹಿಂಗಾರಿನ ಬೆಳೆಗಳಾದ ಜೋಳ (ಮ.ಆ), ಮುಸುಕಿನ ಜೋಳ (ನೀ), ಮುಸುಕಿನ ಜೋಳ (ಮ.ಆ), ರಾಗಿ(ಮ.ಆ), ಹುರುಳಿ(ಮ.ಆ), ಈ ಎಲ್ಲ ಬೆಳೆಗಳು ಬೆಳೆವಿಮೆಗೆ ಒಳಪಡುತ್ತವೆ. ಇದೆ ತಿಂಗಳ 15ನೇ ತಾರೀಕು ಹುರುಳಿ ಬೆಳೆಗೆ ಪ್ರೀಮಿಯಂ ಕಟ್ಟಲು ಕೊನೆಯ ದಿನಾಂಕವಾಗಿದೆ..
ಇನ್ನುಳಿದ ಎಲ್ಲ ಬೆಳೆಗಳಿಗೆ ಡಿಸೆಂಬರ್ 1 ಕೊನೆಯ ದಿನಾಂಕವಾಗಿದೆ.ಡಾ||ಅರವಿಂದ ಕುಮಾರ ಎಮ್. ಕೆ. ಹಾಗೂ ಗ್ರಾಮಸ್ಥರಾದ ಬೋರೇಗೌಡ, ಮಾರೇಗೌಡ, ಶಿವೇಗೌಡ, ಚಂದ್ರಣ್ಣ ಮುಂತಾದವರು ಪಾಲ್ಗೊಂಡಿದ್ದರು.
