ಹಾಸನ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ವಿಜಯೇಂದ್ರ ಆಯ್ಕೆಯಲ್ಲಿ ಯಾರಿಗೂ ಅಸಮಧಾನ ಇರುವುದಿಲ್ಲ. ಎಲ್ಲರೂ ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಹೇಳಿಕೆ ನೀಡಿದ್ದಾರೆ.

ಕುಟುಂಬ ಸಮೇತ ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ತಾಯಿ ಹಾಸನಾಂಬೆ ದರ್ಶನ ಮಾಡಲೆಂದು ಕುಟುಂಬ ಸಮೇತ ಬಂದಿದ್ದು, ದೇವಾಲಯದ ಒಳಗೆ ಬರಬೇಕಾದರೇ ನಾವು ಕಷ್ಟಪಟ್ಟು ಬಂದಿದ್ದೇವೆ. ನಮ್ಮಿಂದ ಜನರಿಗೆ ತೊಂದರೆ ಆಗುತ್ತದೆಯೊ ಎಂದು ನಮಗೆ ಬೇಸರವಾಗುತ್ತದೆ. ಎಸಿ ಮೇಡಂ ಎಲ್ಲರು ಬಿಡಿಸಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕರ್ನಾಟಕದ ಜನತೆಗೆ ಹಾಸನಾಂಬೆ ತಾಯಿ ಒಳ್ಳೆಯದನ್ನು ಮಾಡಲಿ. ಉತ್ತಮವಾದ ಮಳೆಯಾಗಿ ಇಡೀ ರಾಜ್ಯ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರು ಸೇರಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಯುವ ನಾಯಕರನ್ನು ಆಯ್ಕೆ ಮಾಡಿರುವುದು ಒಳ್ಳೆಯ ನಿರ್ಧಾರ. ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಸಿ.ಟಿ. ರವಿ ಎನ್ನುವವರು ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಈಗ ಮಧ್ಯಪ್ರದೇಶ ಹಾಗೂ ಬೇರೆ ಬೇರೆ ಚುನಾವಣೆಗಳ ಜವಬ್ಧಾರಿಯಿದೆ. ಯಾರಿಗೂ ಅಸಮಧಾನ ಇಲ್ಲ. ನೂರಕ್ಕೆ ನೂರು ವಿಶ್ವಾಸದಲ್ಲಿ ಇದ್ದಾರೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *