ಹಾಸನ: ಪಟಾಕಿ ಸಿಡಿಸುವುದನ್ನು ಕಡಿಮೆ ಮಾಡುವ ಮೂಲಕ ಉತ್ತಮ ಪರಿಸರ ಕಾಪಾಡುವ ಮೂಲಕ ಬೆಳಕಿನ ದೀಪಾವಳಿ ಹಬ್ಬವನ್ನು ಆಚರಿಸೋಣ ಎಂದು ವಿನಯ್ ಗುರೂಜಿ ಕರೆ ನೀಡಿದರು.

ಅದಿ ದೇವತೆ ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ವೈಷ್ಣವಿ ದೇವಿ ನೋಡುವುದಕ್ಕೆ ದೂರದ ಸ್ಥಳಕ್ಕೆ ಹೋಗಬೇಕು. ಇಲ್ಲಿ ಹಾಸನಾಂಬೆ ದೇವಿ ದರ್ಶನ ಮಾಡಿ ಸಮಧಾನ ಸಿಕ್ಕಿದೆ. ಇಲ್ಲಿನ ವರಿಗೆ ದೇವಿ ನೋಡುವ ಸೌಭಾಗ್ಯ ದೊರಕಿದ್ದು, ದೀಪಾವಳೀ ಬೆಳಕು ಬರಲಿ. ಆದರೇ ಪಟಾಕಿ ಹೊಡೆಯುವುದನು ದಯಮಾಡಿ ಕಡಿಮೆ ಮಾಡಿ.

ಪ್ರಸ್ತುತ ಬರಗಾಲದಿಂದ ಜನ ತತ್ತರಿಸಿ ಹೋಗಿದ್ದು, ಈ ಪಟಾಕಿ ಸಿಡಿಸುವ ಮೂಲಕ ವಾಯು ಮಾಲಿನ್ಯ ಹಾಳು ಮಾಡಬೇಡಿ ಎಂದರು. ರೈತರನ್ನು ಉಳಿಸಿ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ದೀಪಾವಳಿಯನ್ನು ವಿವೇಕದೊಂದಿಗೆ ಹಣವನ್ನು ಪೋಲು ಮಾಡದೇ ಜ್ಞಾನದ ದೀಪಾವಳಿಯನ್ನು ನಾವೆಲ್ಲಾ ಆಚರಿಸೋಣ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಉತ್ತಮ ವಾತವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *