
ಹಾಸನ: ವಿವಿಧ ರೀತಿಯ ಸಣ್ಣ ಪುಟ್ಟ ಕೆಲಸಗಳಿಗೆ ಜನರು ಕಂದಾಯ ಇಲಾಖೆಗೆ ಬಂದರೇ ನರಳಿಸದೇ ಶೀಘ್ರ ಕೆಲಸವನ್ನು ಮಾಡಿಕೊಡಬೇಕು ಎಂದು ಸೂಚಿಸಿದರು.
ಇನ್ನು ರಾಜ್ಯದಲ್ಲೆ ಜಿಲ್ಲೆ ಅರ್ಜಿ ವಿಲೇವಾರಿಯಲ್ಲಿ ಹಿಂದೂಳಿದಿದೆ ಎಂದು ಬೇಸರವ್ಯಕ್ತಪಡಿಸಿದಲ್ಲದೇ ಸರಿಯಾಗಿ ಮಾಹಿತಿ ನೀಡದ ತಹಸೀಲ್ದಾರ್ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡುತ್ತಾ, ಸಣ್ಣ ಪುಟ್ಟ ವಿಷಯಗಳಿಗೆ ಜನಗಳನ್ನು ಕಂದಾಯ ಇಲಾಖೆ ಗೊಳೂಕ್ಯಬಾರದು ಇದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದು.
ಇದು ಕಂದಾಯ ಇಲಾಖೆ ಭಷ್ಮಾಸುರನ ಕಥೆ ಆಗಿದೆ. ಭಷ್ಮಾಸುರ ತಪಸ್ಸು ಮಾಡಿದಕ್ಕೆ ಶಿವ ವರ ಕೊಟ್ಟ. ಆದ ಕಾರಣ ನೀವು ಸರ್ಕಾರಿ ನೌಕರರಾಗಿದ್ದಿರಿ. ಜನ ಮತ ನೀಡಿ ನಮ್ಮನ್ನು ಶಾಸಕರನ್ನಾಗಿ ಮಾಡಿದ್ದಾರೆ. ಯಾರು ವರ ಕೊಟ್ಟರು ಇಬ್ಬರಿಗೂ ಗೊತ್ತಿಲ್ಲ. ವರ ಕೊಟ್ಟ ಜನರ ಮೇಲೆ ಕಾಲಿಡುವ ಪರಿಸ್ಥಿತಿ ಬಂದಿದೆ. ಸಚಿವರಾಗಿ ನಾನೆ ನಾಡ ಕಛೇರಿಗೆ ಹೋಗಿದ್ದು, ಕಛೇರಿಯಲ್ಲಿ ಹಲವು ಅರ್ಜಿ ಬಾಕಿ ಇದೆ. ಬೆಳಿಗ್ಗೆಯಿಂದಲೆ ಹಾಸನ ಜಿಲ್ಲೆಯಲ್ಲಿ ಇಷ್ಟು ಅರ್ಜಿ ಕೊಟ್ಟಿದ್ದಾರೆ ಎಂದು ಅರ್ಜಿ ಪ್ರದರ್ಶನ ಮಾಡಿದರು.
ಜನ ದಿನನಿತ್ಯ ತಮ್ಮ ಕೆಲಸ ಬಿಟ್ಟು ಕಂದಾಯ ಇಲಾಖೆ ಕಛೇರಿ ಸುತ್ತುವುದು ಒಂದು ಕೆಲಸವಾಗಿದೆ. ನಾನು ಬಂದಿರುವುದಕ್ಕೆ ಎನಾದರು ಫಲಿತಾಂಶ ಆಗಬೇಕು ಎಂದು ತಾಕೀತು ಮಾಡಿದರು. ನಾನು ಬೆಂಗಳೂರಿನಲ್ಲಿ ಕುಳಿತು ನಿರ್ದೇಶನ ನೀಡಿದ್ದರೆ ಆಗುವುದಿಲ್ಲ. ನಾನು ನೀವು ಕುಳಿತು ತೀರ್ಮಾನ ಮಾಡಲು ಬಂದಿದ್ದೆನೆ. ಬರಗಾಲದ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಮಾಡಿ ಎಲ್ಲಾ ಲೆಕ್ಕ ಹಾಕಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಭೇಟಿ ಮಾಡಿದ್ದೆವೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಇಲ್ಲ ಮುಂದಿನ ದಿನಗಳಲ್ಲಿ ಬರಬಹುದು ಬಹಳ ಸಮಸ್ಯೆ ಇರುವ ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಿದ್ದೆವೆ. ಸಮಸ್ಯೆ ಬಂದ ಮೇಲೆ ಎಚ್ಚೆತ್ತುಕೊಳ್ಖುವ ಬದಲು ಮೊದಲೆ ನಾವು ತಯಾರಿಯಾಗಬೇಕು. ಜಿಲ್ಲೆಯ ಯಾವ ತಾಲ್ಲೂಕಿನ ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಅದರ ಪಟ್ಟಿ ಬೇಗ ತಯಾರಾಗಬೇಕು. ಇನ್ನು ಹೊಬಳಿವಾರು, ಪಂಚಾಯತಿ ವಾರು ಟ್ಯಾಂಕರ್ ನೀರಿನ ಸರಬರಾಜು ಬಗ್ಗೆ ಅಡ್ವಾನ್ಸ್ ಟೆಂಡರ್ ಮಾಡಿ ವರ್ಕ್ ಆರ್ಡರ್ ನೀಡಲು ಇದೆ ವೇಳೆ ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಬಂದ ೨೪ ಗಂಟೆ ಸಮಸ್ಯೆ ಬಗೆಹರಿಯಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮದಲ್ಲಿ ಕೊಳವೆ ಬಾವಿ ಬಾಡಿಗೆ ಪಡೆದುಕೊಂಡು ಸಮಸ್ಯೆ ನಿವಾರಣೆ ಮಾಡಲು ಸೂಚನೆ ನೀಡಿದರು. ಮೇವು ಸಮಸ್ಯೆ ಇಲ್ಲ. ಆದರೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ರೈತರಿಗೆ ಪರಿಹಾರ ಪಾವತಿ ಮಾಡುವಾಗ ಬೇಕಾದರದು ಸೇರಿ ಬೇಡವಾರದು ಬಿಟ್ಟು ಹೋಗಿರುತ್ತದೆ. ಗ್ರಾಮ ಆಡಳಿತಾಧಿಕಾರಿ ತಮ್ಮ ನೆಂಟರ ಹೆಸರಿನಲ್ಲಿ ಬರ ಪರಿಹಾರದ ಹಣ ಮಂಜೂರು ಮಾಡಿಕೊಂಡಿದ್ದಾರೆ. ಅದುಕ್ರಾಫ್ ಸರ್ವೆ ಆಗಿದ್ದೆ ಅದನ್ನು ತೆಗೆದು ಪ್ರೂಟ್ ಡೆಟಾ ಮುಖಾಂತರ ಪರಿಹಾರ ವಿತರಣೆ ಆಗಬೇಕು ಎಂದು ಸೂಚಿಸಿದರು.
ಈ ಕಾರಣ ಗ್ರಾಮ ಆಡಳಿತಾಧಿಕಾರಿ ಇಷ್ಟ ಬಂದವರನ್ನು ಸೆರಿಸಲು ಬೇಡವಾದವರನ್ನು ಬಿಡಲು ಆಗಲ್ಲ. ಪ್ರೂಟ್ ಸರ್ವೆಯಲ್ಲಿ ಪೂರ್ತಿ ರೈತರ ಜಮೀನು ಮುಂದಿನ ಹತ್ತು ದಿನಗಳಲ್ಲಿ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಅಪಡೆಟ್ ಮಾಡಬೇಕು ಬೆಳೆ ಪರಿಹಾರ ಸಿಗಬೇಕಾದರೆ ರೈತರ ಪ್ರೂಟ್ ಡೆಟಾಬೆಸ್ ನಲ್ಲಿ ಅಫ್ ಡೆಟ್ ಮಾಡಬೇಕು. ಪ್ರೂಟ್ ಡೆಟಾದಲ್ಲಿ ರೈತರ ಜಮಿನು ನೊಂದಣಿ ಆಗದೆ ಹೋದರೆ ಯಾರಿಗೂ ಪರಿಹಾರ ಸಿಗುವುದಿಲ್ಲ. ಇದನ್ನು ಕ್ಯಾಂಪೆನ್ ಮಾಡಿ ರೈತರಿಗೆ ಮುಂದಿನ ಹತ್ತು ದಿನಗಳಲ್ಲಿ ಮಾಡಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟು ೩೫% ಪಹಣಿಗಳಿಗೆ ಪ್ರೂಟ್ ಐಡಿ ನೊಂದಣಿ ಆಗಿಲ್ಲ. ಅಯಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ರೈತರ ಜಮೀನು ಮಾಹಿತಿ ಇದೆ. ಅದನ್ನು ಪ್ರೂಟ್ ಐಡಿಯಲ್ಲಿ ನೊಂದಣಿ ಮಾಡಲು ಸ್ಥಳದಲ್ಲಿ ವಿ.ಎ ಗಳಿಗೆ ಆದೇಶಿದರು
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಗ್ರಾಮ ಸಹಾಯಕರು ಆಯಾ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಬೆಂಗಳೂರು ಮೈಸೂರಿನಿಂದ ಒಡಾಡುತ್ತಿದ್ದಾರೆ ಎಂದು ಶಾಸಕರು ಸಚಿವರಿಗೆ ದೂರಿದರು. ವಿ.ಎ ಗಳು ಬರಿ ತಾಲ್ಲೂಕು ಕಛೇರಿಯಲ್ಲಿ ಇರುತ್ತಾರೆ. ಇವರುಗಳನ್ನು ರೆವಿನ್ಯೂ ಇನ್ಸ್‌ಪೆಕ್ಟರ್ ಕೂಡ ನಿಯಂತ್ರಣ ಮಾಡುತಿಲ್ಲ ಎಂದು ಆರೋಪಿಸಿದರು. ಪ್ರೂಟ್ ಡೆಟಾ ಆರ್ ಟಿ ಸಿ ಡೆಟಾ ನೀಡಿದರು ನಮಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ೧೮೦೦ ಕೋಟಿ ಹಣ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿದೆ ಮತ್ತು ಕೇಂದ್ರ ಸರ್ಕಾರದವರು ಆರ್ ಟಿ ಸಿ ಆಧಾರ್ ಡಾಟ ಲಿಂಕ್ ಕೊಡಲು ಕೇಳುತ್ತಿದ್ದಾರೆ ಎಂದರು.
ಆರ್ ಟಿ ಸಿ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಿದ್ದರೆ ಮುಂದೆ ರಿಜಿಸ್ಟ್ರಾರೆಷನ್ ನಲ್ಲಿ ಬರುವ ತೊಂದರೆ ನಿವಾರಣೆ ಮಾಡುಬಹುದಾಗಿ ಸಚಿವರು ತಿಳಿಸಿದರು. ೫ ಲಕ್ಷ ೪೦ ಸಾವಿರ ಪ್ರೂಟ್ ಐಡಿ ನೊಂದಣಿ ಬಾಕಿ ಇದೆ. ನಾವು ಸೂಚನೆ ನೀಡಿ ಎರಡು ತಿಂಗಳಾದರು ಕೇವಲ ೭ ಸಾವಿರ ಪ್ರೂಟ್ ಐ ಡಿ ನೊಂದಣಿ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಎಲ್ಲಾ ಇಲಾಖೆ ಕೊ ಆರ್ಡಿನೆಟ್ ಮಾಡಿಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಿದರು. ಇನ್ನು ೧೫ ದಿನಗಳಿಗೆ ಯಾವುದೇ ಬರಗಾಲದ ಬಿಲ್ ಇದ್ದರೆ ಅದನ್ನು ಸಬ್ ಮಿಟ್ ಮಾಡಬೇಕು. ಕೊಡದೆ ಹೋದರೆ ತಹಶಿಲ್ದಾರರೆ ಬಿಲ್ ನೀಡಬೇಕು ಎಂದು ಎಚ್ಚರಿಸಿದರು.
ವಿಎ ಪಿಡಿಒ ನೀರು ಸರಬರಾಜು ಮಂಡಳಿ ಎಇ ಜಂಟಿಯಾಗಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ರಿಪೋರ್ಟ್ ಹಾಕಿದ್ದರೆ ಅದನ್ನು ಅಂಗೀಕಾರ ಮಾಡಬೇಕು. ಇದನ್ನು ವಿಳಂಬ ಮಾಡಬಾರದು. ವಿಳಂಬ ವಾದ್ರೆ ನಾನು ಯಾವುದೇ ಕಾರಣಕ್ಕೂ ಹಣ ನೀಡುವುದಿಲ್ಲ ಎಂದು ಸ್ಚಷ್ಟವಾಗಿ ಸೂಚಿಸಿದರು
ಅರಕಲಗೂಡು ತಾಲ್ಲೂಕಿನಲ್ಲಿ ೮,೨೦೦ ಅರ್ಜಿ ಫಾರಂ ಇರುವ ಬಗ್ಗೆ ತಹಶಿಲ್ದಾರರಗೆ ಪ್ರಶ್ನೆ ಮಾಡಿದರು. ನೀವು ತಹಶಿಲ್ದಾರರ? ನಿಮಗೆ ಬಾಕಿ ಇರುವ ಮಾಹಿತಿ ನಿಮ್ಮ ಬಳಿ ಮಾಹಿತಿ ಯಾಕಿಲ್ಲ? ರಾಜ್ಯದಲ್ಲಿ ಎಲ್ಲೂ ಬಾಕಿ ಇಲ್ಲದೆ ಇರುವುದು ಅರಕಲಗೂಡು ತಾಲ್ಲೂಕಿನಲ್ಲಿ ಯಾಕೆ ಇದೆ ಎಂದು ಪ್ರಶ್ನೆ ಮಾಡಿದರು.
ಫಾರ್೫೩ ಬಂದಿದ್ದು, ೧೯೯೮ನೇ ಸಾಲಿನಲ್ಲಿ. ೨೫ ವರ್ಷ ಆದರೂ ಬಾಕಿ ಯಾಕೆ ಇದೆ ಎಂದು ಗರಂ ಆದರು.
ಸಭೆಯಲ್ಲಿ ಬೇಲೂರು ತಹಶಿಲ್ದಾರರ ವಿರುದ್ಧ ಸಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಫಾರ್ ೫೩ ಫಾರ್ ೫೭ ಎರಡು ಸೇರಿ ಒಂದು ವರ್ಷದಲ್ಲಿ ಮುಕ್ತಾಯಮಾಡಬೇಕು.ಎಲಿಜಬೆಲ್ ಇದ್ದರೆ ಕೊಡಿ ಇಲ್ಲದೆ ಹೊದರೆ ವಜಾ ಮಾಡುವಂತೆ ಸೂಚನೆ ನೀಡಿದರು. ಸಭೆಗೆ ಸರಿಯಾಗಿ ಮಾಹಿತಿ ತರದ ತಹಶಿಲ್ದಾರರಗಳ ವಿರುದ್ಧ ಸಚಿವರು ಆಕ್ರೋಶ. ಬಗರ್ ಹುಕಂ ಆಪ್ ನಲ್ಲಿ ತಿಂಗಳಿಗೆ ಎರಡು ಸಭೆ ನಡೆಸಬೇಕು. ಎನಾದರು ಮಾಡದೆ ಹೋದರೆ ತಹಶಿಲ್ದಾರಗಳಿಗೆ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪಾರ್ಂ ೫೩ ಮತ್ತು ೫೭ ಅರ್ಜಿ ಮಂಜೂರು ಮಾಡುವಾಗ ಅರ್ಜಿ ಹಾಕಿದ ವ್ಯಕ್ತಿ ಕುಟುಂಬದ ಯಾರಿಗು ೪ ಎಕರೆ ೩೮ ಗುಂಟೆಗಿಂತ ಜಮೀನು ಹೆಚ್ಚು ಇರಬಾರದು. ಯಾವುದೇ ಗೋಮಾಳ ಮಂಜೂರು ಮಾಡಬಾರದು. ಅರ್ಜಿ ಹಾಕಿದ ಸ್ಥಳದ ಜಮೀನಿನ ಪೋಟೊ ತೆಗೆದರೆ ಆ ಜಮೀನಿನ ಸ್ಯಾಟಲೈಟ್ ಚಿತ್ರ ದೊರೆಯುತ್ತದೆ. ಅರ್ಜಿ ಹಾಕಿರುವರು ಎಷ್ಟು ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಗುತ್ತದೆ ಎಂದರು.
ಬೆಂಗಳೂರಿನಲ್ಲಿ ಕುಳಿತು ಅರ್ಜಿ ಫಾರಂ ನಂ ೫೩ ಮ್ತತು ೫೭ಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಹಶಿಲ್ದಾರರಗೆ ಸೂಚನೆ ನೀಡಿದರು.
ನಂತರದಲ್ಲಿ ತಹಸೀಲ್ದಾರ‍್ಗಳ ಅವರವರ ತಾಲೂಕಿನಲ್ಲಿ ರೈತರು ಮತ್ತು ಅರಣ್ಯ ಇಲಾಖೆ ಜಮೀನಿನ ತಿಕ್ಕಾಟದ ಬಗ್ಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಡಿದಲ್ಲದೇ ಮೊದಲು ಸರ್ವೆ ಮಾಡಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮಾ, ಶಾಸಕರಾದ ಸಿ.ಎನ್. ಬಾಲಕರಷ್ಣ, ಹೆಚ್.ಪಿ. ಸ್ವರೂಪ್ ಹಾಗೂ ಕೆ.ಎಂ. ಶಿವಲಿಂಗೇಗೌಡ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



