ಹಾಸನ: ಹಿಮೋಫಿಲಿಯಾ ಎಂಬುದು ಯಾರಲ್ಲದಾದರೂ ಕಾಣಿಸಿಕೊಂಡರೇ ಪ್ರಾರಂಭದಲ್ಲೆ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ|| ಹೆಚ್.ಆರ್. ದೇವದಾಸ್ ಅಭಿಪ್ರಾಯಪಟ್ಟರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಖಾಸಗೀ ಹೋಟೆಲೊಂದರ ಸಭಾಂಗಣದಲ್ಲಿ ಹಿಮೋಫಿಲಿಯಾ ಸೊಸೈಟಿ ಹಾಗೂ ಇಂಟಾಸ್ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸೆಲ್ಪ್ ಇನ್ ಫ್ಯೂಜನ್ ತರಬೇತಿ ಹಾಗೂ ಫಿಜಿಯೋಥೆರಪಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಕರ್ನಾಟಕದ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷರಾಗಿರುವ ದಾವಣಗೆರೆಯ ಡಾ. ಸುರೇಶ್ ಅವರು ನನ್ನ ಕ್ಲಾಸ್ಮೆಂಟ್ ಆಗಿದ್ದು, ನಾವೆಲ್ಲಾ ಒಟ್ಟಿಗೆ ಶಿಕ್ಷಣ ಪಡೆದಿದ್ದು, ಅವರು ಸ್ವತಃ ಹಿಮೋಫಿಲಿಯಾ ರೋಗಿ. ಅವರು ಓದ ಬೇಕಾದರೇ ನನ್ನ ಜೊತೆ ಚನ್ನಾಗಿಯೇ ಇದ್ದರು. ನಂತರದಲ್ಲಿ ಉಂಟಾದ ಹಿಮೋಫಿಲಿಯಾ ಖಾಯಿಲೆಗೆ ಅಂಗ ಊನತೆಯಾಗಿ ನಡೆಯುವುದಕ್ಕೆ ಆಗುವುದಿಲ್ಲ.

ಇಂತಹ ರೋಗಿಗಳಿಗೆ ಏನಾದರೂ ಸಹಾಯ ಮಾಡಬೇಕೆಂದು ಎಲ್ಲಾ ಕಡೆ ತಿರುಗಾಡಿ ಭಾರತ ಸರಕಾರದಿಂದ ಏನು ಬರುತ್ತದೆ, ರಾಜ್ಯ ಸರಕಾರದಿಂದ ಏನು ಸೌಲಭ್ಯವಿದೆ ಹಾಗೂ ಹಿಮೋಫಿಲಿಯಾ ರೋಗಿಗಳಿಗೆ ಉಚಿತವಾಗಿ ಏನೆನು ಕೊಡಬಹುದು ಬಗ್ಗೆ ಬಹಳ ಶ್ರಮಪಟ್ಟು ಈಗಲು ಕೆಲಸ ಮಾಡುತ್ತಿದ್ದಾರೆ ಎಂದರು.

ಒಂದು ರಕ್ತನಿಧಿಯನ್ನು ಕೂಡ ಪ್ರಾರಂಭಿಸಿದ್ದಾರೆ. ಎಲ್ಲಾವನ್ನು ಉಚಿತ ಸೇವೆ ಕೊಡುತ್ತಿರುವುದಾಗಿ ನೆನಪಿಸಿಕೊಂಡರು. ರೋಗಿಗಳು ಯಾರು ದೈರ್ಯ ಕಳೆದುಕೊಳ್ಳಬಾರದು. ಹಿಮೋಫಿಲಿಯಾ ಬಂದಾಗ ಮೊದಲ ಹಂತದಲ್ಲೆ ಅದನ್ನು ಪತ್ತೆ ಮಾಡಿ ಅದು ಹೆಚ್ಚು ಮುಂದುವರೆಯದಾಗೆ ಸೂಕ್ತ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತರಾದ ವೆಂಕಟೇಶ್ ಅವರು ಮಾತನಾಡಿ, ಹಿಮೋಫಿಲಿಯಾ ಬಂದಾಗ ಯಾರು ಧೃತಿಗೆಡಬಾರದು. ಸಮಸ್ಯೆ ಆದ ಕೂಡಲೇ ಸಂಬಂಧಪಟ್ಟ ವೈದ್ಯರ ಬಳಿ ಪರೀಕ್ಷಿಸಿಕೊಂಡು ಚಿಕತ್ಸೆ ಪಡೆಯುವ ಮೂಲಕ ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಬೇಕು ಎಂದರು.

ಈ ಪೇಸೆಂಟನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕೆಹೊರತು ಈ ಖಾಯಿಲೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.

ಇನ್ನು ತಮ್ಮ ಈ ಲೈಫ್ ಸ್ಟೈಲನ್ನು ಸಲ್ಪವಾದರೂ ಬದಲಾಯಿಸಿಕೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ಯಾಕ್ಟರ್ ೯ನ್ನು ಮತ್ತು ಕಿಟ್ ನ್ನು ವಿತರಣೆ ಮಾಡಿದರು.

ಇದೆ ವೇಳೆ ಹಿಮೋಫಿಲಿಯಾ ಸೊಸೈಟಿಯ ಕಾರ್ಯದರ್ಶಿ ಹೆಚ್.ಕೆ. ಪಾಲಾಕ್ಷ, ಅಧ್ಯಕ್ಷ ಹರೀಶ್, ಇಂಟಾಸ್ ಫೌಂಡೇಷನ್ ಕುದ್ಸಿಯಾ ಭೇಗಂ, ಸಂಜೀವಿನಿ ಆಸ್ಪತ್ರೆಯ ಫಿಜಿಯೋಥೇರಪಿಸ್ಟ್ ಸುಪ್ರೀತ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *