ಕರ್ನಾಟಕ SSLC ಫಲಿತಾಂಶ 2023ರ ಫಲಿತಾಂಶ ಸೋಮವಾರ (ಮೇ 8) ಪ್ರಕಟವಾಗಿದ್ದು, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 87.87 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ 8,35,102 ಜನ ವಿದ್ಯಾರ್ಥಿಗಳ ಹಾಜರು ಆಗಿದ್ದರು. 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಚಿತ್ರದುರ್ಗ ಪ್ರಥಮ, ಯಾದಗಿರಿ ಕೊನೆಯ ಸ್ಥಾನ: ಚಿತ್ರದುರ್ಗ ಜಿಲ್ಲೆ ಹೆಚ್ಚಿನ ಫಲಿತಾಂಶ ಲಭ್ಯವಾಗಿದ್ದು, ಶೇ.96 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ.ಮಂಡ್ಯ ಜಿಲ್ಲೆಯು ಶೇಕಡಾ 96.74 ಫಲಿತಾಂಶ ಪಡೆದಿದ್ದು, 2ನೇ ಸ್ಥಾನ ಪಡೆದಿದೆ. ಹಾಸನ 96,.68 ಸ್ಥಾನದೊಂದಿಗೆ 3ನೇ ಸ್ಥಾನ ಪಡೆದಿದೆ. ಉಳಿದಂತೆ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆಯಿದ್ದು, ಶೇ.75.49 ಫಲಿತಾಂಶವನ್ನು ಪಡೆದುಕೊಂಡಿದೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ: 61,003 ವಿದ್ಯಾರ್ಥಿಗಳು ಶೇ.90ರಿಂದ 100 ಶೇಕಾಡವಾರು ಅಂಕ ಪಡೆದಿದ್ದಾರೆ. 1,517 ಸರ್ಕಾರಿ ಶಾಲೆಗಳು 100ಕ್ಕೆ 100 ರಿಸರ್ಲ್ಟ್ ಪಡೆದಿದ್ದಾರೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಇಲ್ಲ. ಆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಸೇರಿ ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *