ಸಕಲೇಶಪುರ : ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ವರೆಗೆ ನಡೆಯಲಿದ್ದು ಈ ಚುನಾವಣೆಗೆ ಸಂಬಂಧಪಟ್ಟ ಹಾಗೆ ತಾಲೂಕು ಆಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಈ ಸಮಯದಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಮಾತನಾಡಿ ಸಕಲೇಶಪುರ ಮತಗಟ್ಟೆ ಸಂಖ್ಯೆ 199 ನಲ್ಲಿ ನಾಳೆ ವೋಟಿಂಗ್ ಇರುತ್ತೆ ಎಲ್ಲಾರೂ ಹೋಗಿ ವೋಟ್ ಮಾಡಿ 100% ಮತದಾನ ಮಾಡಬೇಕು ಪೋಲಿಂಗ್ ಬೂತ್ ಟೀಮ್ ಇಂದು ರಾತ್ರಿ ಅಲ್ಲಿಯೇ ಉಳಿದು ಕೊಂಡು ಬೆಳಗ್ಗೆ 5-30ರಿಂದ ಕೆಲಸ ಶುರು ಮಾಡುತ್ತಾರೆ ವೋಟ್ ಪೋಲಿಂಗ್ ಗೆ 90 ನಿಮಿಷ ಮುಂಚಿತವಾಗಿ ರೆಡಿ ಇರುತ್ತಾರೆ ಹಾಗೆ 63 ಮೈಕ್ರೋ ಅಬ್ಸರ್ವರ್ 3 ರಿಸರ್ವ್ ಪೋಲಿಸ್ ಇರುತ್ತೆ ಹಾಗೆ ನಾಳೆ ಮಳೆ ಬರುವ ಸಂಭವ ಇರುವುದರಿಂದ ಬೇಗನೆ ಹೋಗಿ ಮತ ಹಾಕಿ 90 ರಿಂದ 100% ಮತದಾನ ಆಗಬೇಕು ಅಂದರು.A S P ಮಿಥುನ್ ಮಾತನಾಡಿ ಸಕಲೇಶಪುರ ಆಲೂರು ಕಟ್ಟಾಯದ ವಿಧಾನಸಭೆ ಕ್ಷೇತ್ರದ ಚುನಾವಣೆ ಸಂದರ್ಭವಾಗಿ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಹಾಗೂ ಬೇರೆ ಬೇರೆ ಇಲಾಖೆ ಸಿಬ್ಬಂದಿಗಳು ಇಲ್ಲಿ ಬಂದು ಹಾಜರಿದ್ದಾರೆ ಒಟ್ಟು ಪೊಲೀಸ್ ದೃಷ್ಟಿಕೋನದಿಂದ ನೋಡಿದರೆ ನಮ್ಮ 287 ಪೋಲಿಂಗ್ ಬೂತ್ ಗಳು ಇದ್ದಾವೆ ಅದರಲ್ಲಿ 60 ಬೂತ್ ಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳೆಂದು ವಿಂಗಡಣೆ ಮಾಡಿದ್ದೀವಿ. ನಾವು ನಿನ್ನೆ ಸಂಜೆಯೇ ಯಾವ ಯಾವ ಸಿಬ್ಬಂದಿಗಳು ಎಲ್ಲಿ ಕರ್ತವ್ಯ ನಿರ್ವಹಿಸಬೇಕು ಅಂತ ತಿಳಿಸಿದ್ದೇವೆ ಈ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು ಅಂತ ಒಟ್ಟು 315 ಜನ ಬೇರೆ ಬೇರೆ ಜಿಲ್ಲೆಗಳಿಂದ ಅಂದರೆ ಮಂಗಳೂರು ಹಾಗೂ ಕೊಡಗು ಜಿಲ್ಲೆಗಳಿಂದ ಕರೆಸಿಕೊಂಡಿದ್ದೇವೆ ಮತ್ತು ಗೃಹರಕ್ಷಕ ದಳದ 315 ಜನರನ್ನು ಉಪಯೋಗಿಸಿ ಕೊಳ್ಳತ್ತಿದೇವೆಮತ್ತೆ 287 ಮತಗಟ್ಟೆ ಎಲ್ಲವಕ್ಕೂ ಸೇರಿ 14 ಸೆಕ್ಟರ್ ಗಳನ್ನಾಗಿ ವಿಂಗಡಣೆ ಮಾಡಿ ಈ 14 ಸೆಕ್ಟರ್ ಗಳಿಗೆ ಮೂರು ಇನ್ಸ್ಪೆಕ್ಟರ್ ಗಳು ಎಲ್ಲದಕ್ಕೂ ಸೂಪರ್ವೈಸರ್ ಆಫೀಸರ್ ಆಗಿರತ್ತಾರೆ ಅದು ಅಲ್ಲದೇ 7 ಸಬ್ ಇನ್ಸ್ಪೆಕ್ಟರ್ ಗಳು ಕೂಡ ಇರುತ್ತಾರೆಮುಖ್ಯವಾಗಿ 18 ಕ್ಲಸ್ಟರ್ ಬೂತ್ ಗನ್ನಾಗಿ ವಿಂಗಡಣೆ ಮಾಡಿದ್ದೇವೆ ಅಲ್ಲಿ ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡುತ್ತಿದ್ದೇವೆ ಈ ಪಡೆಯಲ್ಲಿ 72 ಜನ ಇದ್ದು ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕು ಉಂಟಗಬಾರದೆಂದು ಯಾರಾದರೂ ಕರೆ ಮಾಡಿದ ಸಂದರ್ಭದಲ್ಲಿ ತಕ್ಷಣ ಅಲ್ಲಿಗೆ ಹೋಗಿ ಸ್ಪಂದಿಸುವ ಕೆಲಸ ಮಾಡತ್ತೇವೆ ಇಷ್ಟೇ ಅಲ್ಲದೆ ಕರ್ನಾಟಕ ರಾಜ್ಯ ಶಸ್ತೃಸ್ತ್ರಪಡೆಯನ್ನು ಬಳಸಿಕೊಳ್ಳುತ್ತಿದ್ದೇವೆ ಯಾರು ಸಹ ಭಯಬಿತರಾಗದೆ ಧೈರ್ಯದಿಂದ ಬಂದು ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದರು.ತಹಶೀಲ್ದಾರ್ ಮೇಘನಾ ಮಾತನಾಡಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆನಮ್ಮ ಸಕಲೇಶಪುರ ವಿಧಾನಸಭಾ ಸಭಾ ಕ್ಷೇತ್ರದಲ್ಲಿ ಮಸ್ಟ್ರೀಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಇದರಲ್ಲಿ ಮತಗಟ್ಟೆ ಸಿಬ್ಬಂದಿಗೆ ಏನೇನೂ ಸಾಮಗ್ರಿಗಳನ್ನು ಕೊಟ್ಟು ಇವರಿಗೆ ಯಾವ ಮತಗಟ್ಟೆ ಅಲರ್ಟ್ ಮಾಡಿದ್ದೇವೆ ಅಂತವರಿಗೆ ಅವರ ಮತಗಟ್ಟೆಗೆ ಕಳುಹಿಸಿಕೊಡುತ್ತಿದ್ದೇವೆ ಸುಮಾರು 287 ಬೂತ್ ಗಳಿಗೆ 4 ಜನ ಮತಗಟ್ಟೆ ಸಿಬ್ಬಂದಿ ಹಾಗೂ ಒಬ್ಬರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಎಂದರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *