ಬೇಲೂರು ಸಮಾಜ ಸೇವೆಗೆ ಮತ್ತೊಂದು ಹೆಸರು ಗ್ರಾನೆಟ್ ರಾಜಶೇಖರ್ ಬೇಲೂರು : ಆರೋಗ್ಯವಾಗಿ ಇದ್ದ ರವಿ ಎಂಬಾತ ಹೃದಯಾಘಾತಕ್ಕೆ ಬಲಿಯಾದ ನೋವು ತಾಳಲಾರದೇ ಪತಿಯ ಶವದ ಎದುರು ರೋದಿಸುತ್ತಲೇ (ತನ್ನಿಬ್ಬರು ಮಕ್ಕಳಲ್ಲಿ ಒಬ್ಬಾತ ಪೂರ್ಣ ಅಂಗವೈಕಲ್ಯ ) ಇಹಲೋಕ ತ್ಯಜಿಸಿದ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದ ಅನಾಥ ಮಕ್ಕಳಿಗೆ ಆಸರೆಯಾಗಿ ಬೇಲೂರು ತಾಲ್ಲೂಕು ಕಾಂಗ್ರೆಸ್ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ ರವರು ಇಂದು ಭೇಟಿಯಾಗಿ ಕುಟುಂಬಕ್ಕೆ ಸಾಂತ್ವನ ಹೇಳಿ ಹಣಕಾಸಿನ ನೆರವನ್ನು ನೀಡಿದರು.ನಂತರ ಮಾತಾಡಿದ ಅವರು ನನ್ನ ಜೀವನದಲ್ಲಿ ಬಡತನ ಹಸಿವು ಕಷ್ಠಗಳ ನೋವಿದ್ದು ನನ್ನ ಈ ಸಮಾಜ ಸೇವೆಯು ಯಾವ ಫಲಾಪೇಕ್ಷೆ ಇಲ್ಲದೆ ಹಲವಾರು ವರ್ಷಗಳಿಂದ ಸುದೀರ್ಘವಾಗಿ ನಡೆಸಿಕೊಂಡು ಬರುತ್ತಿದ್ದೇನೆ.ಪಡುವಾಳಿನ ಈ ನತದೃಷ್ಠ ಕುಟುಂಬದ ನೋವು ನನ್ನ ಮನಸ್ಸನ್ನು ನಾಟಿದ್ದು, ವಿಷಯ ತಿಳಿಯುದ್ದಂತೆ ಗಾಮಕ್ಕೆ ಬಂದು ಆ ಭಗವತನ ಆಶೀರ್ವಾದದಿಂದ ಈ ಚಿಕ್ಕ ಸಹಾಯವನ್ನು ನಾನು ಮಾಡುತ್ತಿದ್ದೇನೆ. ಬೇಲೂರು ತಾಲ್ಲೂಕು ನನ್ನ ರಾಜಕೀಯ ಕರ್ಮ ಭೂಮಿಯಾಗಿದ್ದು ನನ್ನ ಇನ್ನು ಹೆಚ್ಚಿನ ಸಮಾಜ ಸೇವೆಗಳು ನಿರಂತರವಾಗಿರುತ್ತವೆ. ಎ೦ದು ನುಡಿದರು.ಈ ಸಂದರ್ಭದಲ್ಲಿ ದಲಿತ ಮುಖಂಡ ಗೋವಿನಹಳ್ಳಿ ರವಿ. ಬೇಲೂರಿನ ಯುವ ಮುಖಂಡ ಭರತ್. ಹರೀಶ್ ಹಾಗೂ ಗ್ರಾಮದ ಮುಖ್ಯಸ್ಥರು ಹಾಜರಿದ್ದರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *