ಹಾಸನ: ಮಣಿಪುರದಲ್ಲಿ ಸಿ.ಆರ್.ಪಿ.ಎಫ್. ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನದ ಪದ್ಮರಾಜು ೫೨ ವರ್ಷ ಅವರು ಅನಾರೋಗ್ಯದಿಂದ ಸಾವನಪ್ಪಿದ್ದು, ಶನಿವಾರದಂದು ನಗರದ ಬಿಟ್ಟಗೌಡನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಕಳೆದ ಎರಡು ದಿನಗಳ ಹಿಂದೆ ಮಣಿಪುರದಲ್ಲಿ ಸಾವನಪ್ಪಿದ ಪದ್ಮರಾಜು ಅವರ ಪಾರ್ಥಿವ ಶರೀರವನ್ನು ನಗರದ ಕೆ.ಆರ್.ಪುರಂನಲ್ಲಿ ವಾಸವಿರುವ ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ಮಿಲ್ಟ್ರಿ ವಾಹನದಲ್ಲಿ ಸೈನಿಕರೊಂದಿಗೆ ತರಲಾಯಿತು.

ಯೋಧರಾಗಿ ೧೬ ವರ್ಷಗಳ ಕಾಲ ಸಿಆರ್‌ಪಿಎಫ್‌ನಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧ ಮತ್ತೆ ಸೇವೆಯಲ್ಲಿ ತೊಡಗಲು ನಿರ್ಧರಿಸಿ ಪ್ರಸ್ತೂತ ಮಣಿಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ೩೧ ವರ್ಷದಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಸಾವನಪ್ಪಿದ್ದಾರೆ.

ಮನೆ ಮುಂದೆ ಪಾರ್ಥಿವ ಶರೀರ ಬರುತ್ತಿದ್ದಂತೆ ನೂರಾರು ಜನರು ಅಂತಿಮ ದರ್ಶನ ಪಡೆದರು. ನಂತರ ತೆರೆದ ವಾಹನದಲ್ಲಿ ಯೋಧನನ್ನು ಮೆರವಣಿಗೆ ಮೂಲಕ ನಗರದ ಹೊರವಲಯದಲ್ಲಿರುವ ಬಿಟ್ಟಗೌಡನಹಳ್ಳಿಗೆ ಕರೆದೊಯ್ದು ಅಂತಿಮ ನಮನ ಸಲ್ಲಿಸಿದರು.

ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರಿ ಇದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *