ಚನ್ನರಾಯಪಟ್ಟಣ : ಗ್ರಾಮದ ಅಧಿದೇವತೆ ಶ್ರೀ ವಳಗೆರಮ್ಮನಿಗೆ ಕಾರ್ತಿಕ ಮಾಸದ ಅಂಗವಾಗಿ ಒಳಗೆ ನಮ್ಮ ಸೇವಾ ಟ್ರಸ್ಟ್ ವತಿಯಿಂದ ವಿಶೇಷವಾಗಿ ದುರ್ಗಾ ಹೋಮ ಬಂದಂತಹ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು

ಪಟ್ಟಣದ ಅಧಿದೇವತೆ ಶ್ರೀ ವಳಗೆರಮ್ಮ ದೇವಸ್ಥಾನದಲ್ಲಿ ಆವರಣದಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಬಂದಂತಹ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು

ಜೊತೆಗೆ ಬೆಳಗ್ಗೆ ಒಂಬತ್ತು ಗಂಟೆಗೆ ಅಭಿಷೇಕವನ್ನು ಕೂಡ ನೆರವೇರಿಸಿ ದೃಷ್ಟಿ ಪೂಜೆಯನ್ನು ಹಾಗೂ 12:30ಕ್ಕೆ ದುರ್ಗಾ ಹೋಮವು ಕೂಡ ನೆರವೇರಿಸಲಾಯಿತು ಸಂಜೆ 7 ಗಂಟೆಗೆ ಭಕ್ತಾದಿಗಳಿಂದ ದೀಪೋತ್ಸವ ಕಾರ್ಯಕ್ರಮವು ಕೂಡ ಆಯೋಜಿಸಲಾಯಿತು

ಭಕ್ತಾದಿಗಳು ದೀಪ ಮತ್ತು ಎಣ್ಣೆ ಬತ್ತಿಯನ್ನು ತಂದು ಅಮ್ಮನವರಿಗೆ ದೀಪವನ್ನು ಹಚ್ಚಿ ತಮ್ಮ ಇಷ್ಟಾರ್ಥಗಳು ಪೂರೈಸುವಂತೆ ದೇವಿಯ ಕೋರಿದರು

ಇದೇ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿನ ಕಾರ್ಯದರ್ಶಿಸಿ ವಿ ಲೋಹಿತ್. ಸಹ ಕಾರ್ಯದರ್ಶಿ ದೇವಿಪ್ರಸಾದ್. ಗೌರವಾಧ್ಯಕ್ಷ ಸುರೇಶ್. ಅಧ್ಯಕ್ಷ ದೇವರಾಜ್. ಖಜಾಂಚಿ ಚಂದ್ರಬಾಬು. ನಿರ್ದೇಶಕ ನವೀನ್ .ಜೈ ಶಂಕರ್. ಕಿರಣ್ ಕುಮಾರ್ ಇನ್ನು ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *