
ಆಲೂರು : ತಾಲ್ಲೂಕಿನ ಕಿರಗಡಲು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರೀ ಪಂಚಾಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದ್ದು ದಿ :11/12/23 ನೇ ಸೋಮವಾರ ಸಂಜೆ 06/30 ರಿಂದ 8 ರ ವರೆಗೆ ಶ್ರೀ ಪಂಚಾಲಿಂಗೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ ಮಹಾ ಮಂಗಳಾರತಿ ಜಂಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ
ಮತ್ತು ದಿ :12/12/23 ನೇ ಮಂಗಳವಾರ ಬೆಳಗ್ಗೆ 12 ಗಂಟೆಗೆ ಯಗಚಿ ನದಿಯಲ್ಲಿ ಗಂಗಾಪೂಜೆ, ತೀರ್ಥಸ್ಥಾನ ಸಮೇತ, ನಂದಿಧ್ವಜ ಕುಣಿತ,ಭದ್ರಕಾಳಮ್ಮನ ಕಳಸ,ವೀರಭದ್ರೇಶ್ವರ ಮತ್ತು ದಕ್ಷ ಬ್ರಹ್ಮದೇವರ ಅಡ್ಡೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ 2-30 ರಿಂದ 3-30 ಗಂಟೆಗೆ ಸರಿಯಾಗಿ ಶ್ರೀ ಪಂಚಲಿಂಗೇಶ್ವರಸ್ವಾಮಿಯವರ ಅಗ್ನಿ ಕೆಂಡೋತ್ಸವ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಪಂಚಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಎಲ್ಲಾ ಸಾರ್ವಜನಿಕರಿಗೂ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಗ್ರಾಮ, ಪಂ, ಅಧ್ಯಕ್ಷ ಶಾಂತಪ್ಪ ಮನವಿ ಮಾಡಿದರು
ಗ್ರಾಮಸ್ಥರಾದ ರುದ್ರೇಗೌಡ ಮಾತಾನಾಡಿ ಕಿರಗಡಲು ಗ್ರಾಮದಲ್ಲಿ ಪಂಚಲಿಂಗೇಶ್ವರಸ್ವಾಮಿ ಉದ್ಭವಗೊಂಡಿದ್ದು ಈ ತರಹದ ಪುಣ್ಯ ಸ್ಥಳ ತಲಕಾಡನ್ನು ಬಿಟ್ಟರೆ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಕಾಣಬಹುದಾಗಿದೆ,ಈ ಗ್ರಾಮ ಒಂದು ಐತಿಹಾಸಿಕ ಪುಣ್ಯ ಸ್ಥಳವಾಗಿದ್ದು ‘ದೇವರಮನೆ ಕೊಪ್ಪಲು ‘ಎಂಬ ಪ್ರತಿಥಿ ಇದೇ ಈ ಪಂಚಲಿಂಗೇಶ್ವರ ಸ್ವಾಮಿ ಚರಿತ್ರೆ ಬಹಳ ಇದ್ದು ಸುತ್ತಮುತ್ತಲಿನ ಗ್ರಾಮಸ್ಥರರಾದ ಸಿಂಗೋಡನಹಳ್ಳಿ ಕೊಪ್ಪಲು,ಕಿರಗಡಲು, ದೇವರಮನೆ ಕೊಪ್ಪಲು, ದೇವರಮನೆ, ಗ್ರಾಮಸ್ಥರು ಸೇರಿ ಸಂಬಂಧ ಪಟ್ಟ ಭಕ್ತಾಧಿಗಳು ಮೂರು ರಿಂದ ನಾಲ್ಕು ಸಾವಿರ ಜನ ಶ್ರದ್ದ ಭಕ್ತಿಯಿಂದ ಆಚರಿಸುತ್ತೇವೆ,, ಅಲ್ಲದೆ ಈ ಜಾತ್ರಮಹೋತ್ಸವಕ್ಕೆ ಬರುವಂಥಹ ಭಕ್ತಾಧಿಗಳಿಗೆ ಕೆ, ಎಸ್, ಆರ್, ಟಿ,ಸಿ, ಯಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಗ್ರಾಮಕ್ಕೆ ಕಲ್ಪಿಸಲಾಗಿದೆ ಹಾಗೂ ಭಕ್ತಾಧಿಗಳಿಗೆ ಅನ್ನ ಸಂತಾರ್ಪಣೆಯನ್ನು ಏರ್ಪಡಿಸಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದರು
ಪತ್ರಿಕಾಗೋಷ್ಟಿಯಲ್ಲಿ ಕದಾಳು ಗ್ರಾಮ, ಪಂಚಾಯಿತಿ ಅಧ್ಯಕ್ಷ ಶಾಂತಪ್ಪ, ರುದ್ರೇಗೌಡ ವ್ಯವಸಾಯೋತ್ಪಾನ್ನ ಮಾರುಕಟ್ಟೆ ಕಿರಗಡಲು, ರಾಜೇಗೌಡ ಮಾಜಿ ಗ್ರಾಮ ಪಂ, ಅಧ್ಯಕ್ಷ ಕಿರಗಡಲು, ರುದ್ರೇಗೌಡ ಹಾಲು ಉತ್ಪಾದಕರ ಸಹಕಾರ ಸಂಘ ಕಿರಗಡಲು ಹಾಗೂ ಗ್ರಾಮಸ್ಥರಾದ ಚಿಂತನ್, ಮಧು, ಉಮೇಶ್, ಕುಮಾರ ಯಶು ಇದ್ದರು,,,
