ಚನ್ನರಾಯಪಟ್ಟಣ : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಹಾಗೂ ದಸರಾದ ಗಜರಾಜ ಅರ್ಜುನನಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪಟ್ಟಣದ ಹಳೇಬಸ್ ನಿಲ್ದಾಣದ ಹತ್ತಿರ ಪರಿಷತ್ ಕಛೇರಿಯಲ್ಲಿ ತಾಲೂಕು ಅಧ್ಯಕ್ಷರಾದ ಹಡೇನಹಳ್ಳಿ ಲೋಕೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಲೊಕೇಶ್ ನಾಡು ಕಂಡ ಮೇರು ನಟಿ ಲೀಲಾವತಿ ಅಮ್ಮನವರು ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈಯನಿಸಿಕೊಂಡವರು.

ಅವರ ನಿಧನ ಚಿತ್ರರಂಗ ಹಾಗೂ ಕನ್ನಡ ನಾಡು ಬಡವಾಗಿದೆ. ಸುಮಾರು 8 ಭಾಷೆಗಳಲ್ಲಿ ಚಿತ್ರ ನಟನೆ ಮಾಡಿದ್ದು ತಾಯಿ ಮಗನ ಭಾಂದವ್ಯ ಮರೆಯಲಾಗದು.ನಾಡ ಹಬ್ಬ ದಸರಾದಲ್ಲಿ 8ಬಾರಿ ಅಂಬಾರಿ ಹೊತ್ತು ತನ್ನದೇ ಆದ ಗಾಂಭೀರ್ಯವನ್ನು ಮೆರೆದ ಅರ್ಜುನ ಇಹಲೋಕ ತ್ಯಜಿಸಿರುವುದು ಬೇಸರದ ಸಂಗತಿ ಹುಟ್ಟಿನದ ಮೇಲೆ ಸಾವು ಖಚಿತ ಆದರೆ ಸಮಾಜಕ್ಕೆ ಏನಾದರೂ ಗುರುತರವಾದ ಸಾಧನೆಯನ್ನು ಬಿಟ್ಟು ಹೋಗಬೇಕು ಆಗ ಮಾತ್ರ ಬದುಕಿದಕ್ಕೆ ಸಾರ್ಥಕವಾಗುತ್ತದೆ ಎಂದರು.ಕನ್ನಡ ಪರ ಹೋರಾಟಗಾರ ಪುಟ್ಟಣ್ಣಗೋಕಾಕ್ ಮಾತನಾಡಿ ರಾಜ್ಯದಲ್ಲಿ ಬರಗಾಲ ಬಂದಿದ್ದಾಗ ಲೀಲಾವತಿಯವರು, ಡಾ.ರಾಜ್‌ಕುಮಾರ್ ಹಾಗೂ ಚಲನಚಿತ್ರ ತಂಡದೊAದಿಗೆ ಬಂದಿದ್ದು ಅಂದಿನ ಪಟ್ಟಣದ ಪುರಸಭೆಯ ಮುಂಭಾಗವಿದ್ದ ಉದ್ಯಾನವನದಲ್ಲಿ ಹಣ ಸಂಗ್ರಹಿಸಿ ರಾಜ್ಯದ ಉತ್ತರ ಕರ್ನಾಟಕ ಮತ್ತಿತರ ಭಾಗದ ಸಂಕಷ್ಟ ಜನರಿಗೆ ಸಹಾಯ ನೀಡಿದ್ದು ಅವರ ಸಮಾಜ ಸೇವೆ ನೆನೆಪುವಂತಹದು ಎಂದರು.

ಯಶೋಧಜೈನ್, ಜಬೀಉಲ್ಲಾ ಬೇಗ್, ಮುಳ್ಕೆರೆ ಪ್ರಕಾಶ್, ಶಿವನಗೌಡಪಾಟೀಲ್ ಸಭೆಯಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆನಂದ್‌ಕಾಳೇನಹಳ್ಳಿ, ಶೋಭಾ, ಸತ್ಯನಾರಾಯಣ್ ಮತ್ತಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *