
ಹಾಸನ: ಮೇಕೆಯನ್ನು ಮೇಯಿಸಲು ಹೋಗಿದ್ದ ಸುಶೀಲಮ್ಮ ೬೫ ವರ್ಷ ವೃದ್ಧೆಯಿಂದ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಹತ್ಯೆಗೈದಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.
ನಗರದ ಎನ್.ಆರ್. ವೃತ್ತ ಬಳಿ ಇರುವ ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಬಸವರಾಜಾಚಾರಿ ತಾಯಿ ಸುಶೀಲಮ್ಮ ಮತ್ತು ತಂದೆ ಭಾಸ್ಕರಚಾರಿ ಇಬ್ಬರು ನಮ್ಮಿಂದ ಪ್ರತೈಕ ಹೊರ ಹೋಗಿ ಬೇರೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ಸುಶೀಲಮ್ಮ ಅವರು ಮೇಕೆಗಳ ಮೇಯಿಸಲು ಕೆರೆಕೋಡಿ ನಾಯಿಗುಂಡಿ ಹಳ್ಳದ ಬಳಿ ಹೋಗುತ್ತಿದ್ದರು.
ಸಂಜೆ ೬ ಗಂಟೆ ಸಮಯದಲ್ಲಿ ಮನೆಗೆ ಮೇಕೆಗಳು ಮಾತ್ರ ಬಂದಿದ್ದು, ಆದರೇ ತಾಯಿ ಸುಶಿಲಮ್ಮ ಮನೆಗೆ ಬಂದಿರುವುದಿಲ್ಲ ಎಂದು ಪತ್ನಿ ಅವರು ಬಸವರಾಜಾಚಾರ್ ಕರೆ ಮಾಡಿ ತಿಳಿಸಿದ್ದು, ಕೂಡಲೇ ನಾನು ಊರಿಗೆ ವಾಪಸ್ ಬಂದು ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಬೆಳಿಉಗ್ಗೆ ಸಮಯದಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ನಾಯಿಗುಂಡಿ ಹಳ್ಳದ ಹತ್ತಿರ ಹಳ್ಳದ ನೀರಿನಲ್ಲಿ ಹೆಂಗಸಿನ ಶವ ತೇಲಾಡುತ್ತಿತ್ತು. ಶವದ ಮೇಲೆ ಒಂದು ಮರದ ದಿಮ್ಮಿ ಇದ್ದಂತೆ ಕಾಣಿಸಿತು. ಶವವನು ದಡಕ್ಕೆ ತಂದಾಗ ಆಕೆಯ ದೇಹದ ಮೇಲಿದ್ದ ಒಡವೆಗಳು ಇರಲಿಲ್ಲ. ಚಿನ್ನದ ಆಭರಣ ದೋಚುವ ಉದ್ದೇಶದಲ್ಲಿ ಉಸಿರುಗಟ್ಟಿಸಿ ಇಲ್ಲವೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದಲ್ಲದೇ ಶವ ಪತ್ತೆ ಆಗದಂತೆ ಮರದ ದಿಮ್ಮಿ ಕಟ್ಟಿ ನೀರಿನಲ್ಲಿ ಮುಳುಗಿಸಲಾಗಿತ್ತು ಎಂದರು.
ಈ ಬಗ್ಗೆ ಮೃತ ತಾಯಿಯ ಪುತ್ರ ಬಸವರಾಜಾಚಾರಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು.
ಸಿಕ್ಕ ಆರೋಪಿಗಳು ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಅಡಗೂರು ಗ್ರಾಮದ ಕಾರ್ತಿಕ್ ೨೦ ವರ್ಷ ಮತ್ತು ಅದೆ ಗ್ರಾಮದ ಇನ್ನೋರ್ವ ಆರೋಪಿ ಸಾಗರ್ ೨೦ ವರ್ಷ ಎಂಬುವರನ್ನು ಬಂಧಿಸಿ ದೋಚಿದ್ದ ಒಡವೆಯನ್ನು ವಾಪಸ್ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
