
ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣ ಖಗೋಳ ವಿಜ್ಞಾನದ ಸಾಮಾನ್ಯ ಪ್ರಕ್ರಿಯೆ ಆಗಿದೆ. 2023ರಲ್ಲಿ ಸಹ 2 ಚಂದ್ರ ಗ್ರಹಣ ಹಾಗೂ 2 ಸೂರ್ಯ ಗ್ರಹಣ ಸಂಭವಿಸಿದೆ. 2024ರಲ್ಲಿ ಸಹ ಗ್ರಹಣಗಳಿದ್ದು, ಯಾವಾಗ ಯಾವ ಗ್ರಹಣವಿದೆ ಎಂಬುದು ಇಲ್ಲಿದೆ.
ಅಯೋಧ್ಯೆಯ ಜ್ಯೋತಿಷಿ ಪಂಡಿತ್ ಕಲ್ಕಿ ರಾಮ್ ಅವರ ಪ್ರಕಾರ 2024 ರ ಮೊದಲ ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಹಾಗೆಯೇ, ಮೊದಲ ಸೂರ್ಯಗ್ರಹಣವು ಸೋಮವಾರ ಏಪ್ರಿಲ್ 8, 2024 ರಂದು ನಡೆಯಲಿದೆ.
2024 ರ ಎರಡನೇ ಚಂದ್ರಗ್ರಹಣವು ಬುಧವಾರ, ಸೆಪ್ಟೆಂಬರ್ 18, 2024 ರಂದು ಹಾಗೂ 2ನೇ ಮತ್ತು ಕೊನೆಯ ಗ್ರಹಣವು ಸೂರ್ಯಗ್ರಹಣವಾಗಿದ್ದು, ಅದು ಬುಧವಾರ, ಅಕ್ಟೋಬರ್ 2, 2024 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಜ್ಯೋತಿಷ್ಯದ ಪ್ರಕಾರ, 2024 ರ ಮೊದಲ ಗ್ರಹಣವು ಮಾರ್ಚ್ 25 ರಂದು ನಡೆಯುತ್ತಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲಈ ಚಂದ್ರಗ್ರಹಣವು 04 ಗಂಟೆ 36 ನಿಮಿಷಗಳ ಕಾಲ ಇರುತ್ತದೆ ಎನ್ನಲಾಗುತ್ತದೆ.
2024 ರ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 08 ರಂದು ಸಂಭವಿಸುತ್ತದೆ, ಇದೂ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗೆಯೇ, ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 02 ರಂದು ಸಂಭವಿಸುತ್ತದೆ
