ಬೇಲೂರು : ಪಟ್ಟಣದ ಹೊರವಲಯದ ಭಾರತ್ ಕನ್ವೆಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಸಚಿವ ಬಿ ಶಿವರಾಂ ಹಾಗೂ ಎಂಪಿ ಚುನಾವಣೆಯ ಆಕಾಂಕ್ಷಿಯಾಗಿರುವ ಜತ್ತಿನಹಳ್ಳಿ ರಾಮಚಂದ್ರ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು.

ಈ ವೇಳೆ ಲೋಕಸಭಾ ಚುನಾವಣಾ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಮುಕ್ತ ವಾಗಿ ಅವಕಾಶವನ್ನುಹಂಚಿಕೊಳ್ಳಲು ತಿಳಿಸಿದ ಹಿನ್ನಲೆಯಲ್ಲಿ ತಾಪಂ ಮಾಜಿ ಸದಸ್ಯ ನೇರ್ಲಗೆ ಸೋಮಣ್ಣನವರು ಮಾತನಾಡಿ ಕಳೆದ ಬಾರಿ ಚುನಾವಣೆಯಲ್ಲಿ ಬಿ ಶಿವರಾಂ ಅವರು ಅಲ್ಪನತದ ಅಂತರದಿಂದ ಸೋಲಲು ಕಾರ್ಯಕರ್ತರಿಂದ ಸೋಲಲು ಕಾರಣವಾಗಿದೆ ಎಂಬ ಮಾತಿಗೆ ಸಿಟ್ಟಾದ ಗ್ರಾನೈಟ್ ರಾಜಶೇಖರ್ ಬೆಂಬಲಿಗರಾದ ಧನಪಾಲ್,ಮಂಜುನಾಥ್ ಮಲ್ಲೇಶ್ ,ಜಯಣ್ಣ ಸೇರಿದಂತೆ ಇತರರು ಏರು ಧ್ವನಿಯಲ್ಲಿ ಧಿಕ್ಕಾರ ಕೂಗಿ ವೇಧಿಕೆ ಬಳಿ ಮುಂಭಾಗದಲ್ಲಿ ಬಂದು ಗೊಂದಲ ಸೃಷ್ಟಿಸುತ್ತಿದ್ದರು.

ಇದೇ ವೇಳೆ ವೇಧಿಕೆ ಪಕ್ಕದಲ್ಲಿದ್ದ ಎಂ ಆರ್ ವೆಂಕಟೇಶ್ ತೌಫಿಕ್ ,ಜಮಾಲ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಕಾರ್ಯಕರ್ತರನ್ನು ಸಮಧಾನಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಮಾತಿನ ಚಕಮಕಿ ಜೋರಾಗಿ ನಡೆಯುತ್ತಿತ್ತು.ಇದೇ ವೇಳೆ ಮಾತಿಗೆ ಮಾತು ನಡೆದು ಚೇರ್ ಹಿಡಿದು ಬಡಿದಾಡುವ ಹಂತಕ್ಕೆ ಮುಂದಾದರು.

ಇದೇ ವೇಳೆ ನಮ್ಮ ನಾಯಕರಾದ ರಾಜಶೇಖರ್ ಅವರನ್ನು ಸಭೆಗೆ ಆಹ್ವಾನಿಸಿಲ್ಲ ಈ ಸಭೆ ಅವಶ್ಯಕತೆ ಇಲ್ಲ ಎಂದು ಸಭೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದವರ ನಡುವೆ ಹಾಗೂ ಕಾರ್ಯಕರ್ತರ ನಡುವೆ ಬಡಿದಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಯಿತು.

ಈ ಇಬ್ಬರ ಬೆಂಬಲಿಗರ ನಡುವೆ ಜೋರಾದ ಬಡಿದಾಟದಿಂದಾಗಿ ಸುಮಾರು ೨೦ ಕ್ಕೂ ಹೆಚ್ಚು ಚೇರ್ ಗಳು ಪುಡಿಪುಡಿಯಾಗಿದ್ದು ನಂತರ ಗೊಂದಲ ಸೃಷ್ಟಿಸಿದ್ದ ಧನಪಾಲ್ ಹಾಗೂ ಮಲ್ಲೇಶ್ ಅವರಿಗೆ ತೀವ್ರವಾದ ಗಾಯಗಳಾದವು.ಇದೇ ವೇಳೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಅಲ್ಲಿದ್ದ ಕೆಲ ನಾಯಕರು ಮೂಕಪ್ರೇಕ್ಷಕರಂತೆ ಈ ಗಲಾಟೆಯನ್ನು ನೋಡುತ್ತಾ ನಿಂತರು.ಗೊಂದಲಕ್ಕೆ ಕಾರಣರಾದವರು ಸಭೆಯಿಂದ ಹೊರ ನಡೆದ ನಂತರ ಮತ್ತೆ ಸಭೆ ಪ್ರಾರಂಭಿಸಲಾಯಿತು.

ವಿಷಯ ತಿಳಿದು ಸ್ಥಳಕ್ಕೆ ವೃತ್ತ ನಿರೀಕ್ಷಕ ರವಿಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *