
ಚಗಚಗೆರೆ : ಬೋರ್ಡೋ ಮಿಶ್ರಣ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಚಗಚಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದರು.
ಈ ಬೋರ್ಡೋ ಮಿಶ್ರಣವು ತೆoಗಿನಲ್ಲಿ ಹಾಗೆ ಅಡಿಕೆ ಯಲ್ಲಿ ಕಂಡು ಬರುವ ಕೊಳೆರೋಗ , ಅಂಗಮಾರಿ ರೋಗ, ಬೂದಿ ರೋಗ ಹಾಗೂ ಮುಂತಾದ ರೋಗಗಳಿಗೆ ಪರಿಣಾಮಕಾರಿ ಎಂದು ರೈತರಿಗೆ ಮನದಟ್ಟು ಮಾಡಿಕೊಟ್ಟರು. ಬೋರ್ಡೋ ಮಿಶ್ರಣ ತಯಾರಿಕೆಗೆ ಬೇಕಾದ ಸಾಮಗ್ರಿಗಳಿಂದ ಹಿಡಿದು ಅದರ ತಯಾರಿಕೆಯನ್ನು ಪ್ರತ್ಯಕ್ಷವಾಗಿ ರೈತರ ಮುಂದೆ ತೋರಿಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಮಹಾವಿದ್ಯಾಲಯದ ಡಾ. ಮಂಜುನಾಥ ಹೆಚ್ , ಸಹಾಯಕ ಪ್ರಾಧ್ಯಾಪಕರು ಸಸ್ಯ ರೋಗ ಶಾಸ್ತ್ರ ಇವರು ಬೋರ್ಡೋ ಮಿಶ್ರಣದ ಉಪಯೋಗಗಳನ್ನು ರೈತರಿಗೆ ತಿಳಿಸಿಕೊಟ್ಟರು.
