*ಪಶು ಆರೋಗ್ಯ ತಪಾಸಣಾ ಶಿಬಿರ*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಹಾಗೂ ಪಶು ವೈದ್ಯಕೀಯ ಹಾಸನ ವಿದ್ಯಾರ್ಥಿಗಳ ಸಹಾಭಾಗೀತ್ವದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಪಶು ಆರೋಗ್ಯ ತಪಾಸಣಾ ಶಿಬಿರ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮವು ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಡೀನ್ ರವರಾದ ಡಾ||ಎಸ್. ಎನ್ ವಾಸುದೇವನ್ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಪಶು ವೈದ್ಯಕೀಯ ಕಾಲೇಜಿನ ಸಿಬಂದ್ದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಆಗಮಿಸಿ ಕುಡುಕುಂದಿ ಗ್ರಾಮದ ವಿವಿಧ ಜಾನುವಾರುಗಳ ಆರೋಗ್ಯ ತಪಾಸಣೆಯನ್ನು ಮಾಡಿದರು.18 ಎತ್ತುಗಳು,137ಹಸುಗಳು ,7 ಕರುಗಳು ,26 ಎಮ್ಮೆಗಳು ,16 ಮೇಕೆಗಳು,18 ಕುರಿಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.

ಈ ಕಾರ್ಯಕ್ರಮಕ್ಕೆ ಪಶು ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಾ ವಿಭಾಗದ ಡಾ|| ನಾಗರಾಜು, ಡಾ|| ಶಂಕ್ರೇಗೌಡ ಪ್ರಸೂತಿ ಶಾಸ್ತ್ರ ವಿಭಾಗ, ಡಾ||ಅಶ್ವಿನಿ ,ಸಹಾಯಕ ಪ್ರಾಧ್ಯಪಕರು ಮೆಡಿಸಿನ್ ವಿಭಾಗ, ಸುದೀಪ್ ಕಿರಿಯ ಪಶು ವೈದ್ಯಕೀಯ ಪರೀಕ್ಷಕರು, ಗಂಡಸಿ,ಉಮೇಶ್ ಬಿಜಿನೆಸ್ ಆಫೀಸರ್ ಹಾಗೂ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಸಂಯೋಜಕರಾದ ಡಾ|| ಶಂಕರ ಎಮ್. ಎಚ್ ಹಾಗೂ ಕುಡುಕುಂದಿ ಗ್ರಾಮದ ಸಹ ಸಂಯೋಜಕರಾದ ಡಾ|| ಅರವಿಂದಕುಮಾರ ಎಮ್. ಕೆ ಹಾಗೂ ಸಹ ಪ್ರಾಧ್ಯಾಪಕರುಗಳಾದ ಡಾ||ಶಶಿಕಿರಣ್ ಎ. ಎಸ್, ಡಾ|| ನವೀನ್ ಕುಮಾರ ಪಿ ಮತ್ತು ಗ್ರಾಮದ ರೈತರು, ಮುಖಂಡರು ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಸುದೀಪ ರವರು ವಿವಿಧ ಚಿಕಿತ್ಸೆಗಳ ವಿವರ ಹಾಗೂ ಜಾನುವಾರುಗಳಗೆ ಯಾವ ರೀತಿ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಬಗ್ಗೆ ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *