*ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ರಸಸಾರದಲ್ಲಿ(ph) ಬದಲಾವಣೆಯಾಗುತ್ತಿದೆ. ಇದರಿಂದ ಬೆಳೆಗಳ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾಗಾಗಿ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸಮಸ್ಯಾತ್ಮಕ ಮಣ್ಣುಗಳಾದ ಹುಳಿ ಮಣ್ಣು, ಚೌಳು/ಸವಳು ಮಣ್ಣು, ಕ್ಷಾರ ಮಣ್ಣು ಮುಂತಾದವುಗಳ ಗುಣಲಕ್ಷಣಗಳು ಹಾಗೂ ಅವುಗಳ ಸುಧಾರಣ ಕ್ರಮಗಳನ್ನು ತಿಳಿಸಿದರು.

ನಾವು ಸಮಸ್ಯಾತ್ಮಕ ಮಣ್ಣುಗಳನ್ನು ನಿರ್ವಹಣೆ ಮಾಡಲು ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು,ಅದರ ಫಲಿತಾಂಶದ ಆಧಾರದ ಮೇಲೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬಹುದು. ಮಣ್ಣು ಮಾದರಿಯಲ್ಲಿ ಆಮ್ಲೀಯತೆ ಹೆಚ್ಚಿದರೆ, ಹುಳಿ ಮಣ್ಣು ಎಂದು ಅರ್ಥ ಅದನ್ನು ನಿರ್ವಹಣೆ ಮಾಡಲು ಸುಣ್ಣವನ್ನು ಭೂಮಿಗೆ ಸೇರಿಸಬೇಕು, ಚೌಳು ಮಣ್ಣಾಗಿದ್ದರೆ,ಭೂಮಿಯ ಮೇಲೆ ಬಿಳಿ ಪದರ ಕಾಣಿಸುತ್ತದೆ.

ಇದನ್ನು ನಿರ್ವಹಿಸಲು ಚೆನ್ನಾಗಿ ಹದ ಮಾಡಿ ನೀರು ನಿಲ್ಲಿಸಬೇಕು,ಹಸಿರು ಗೊಬ್ಬರ ಹಾಕಬೇಕು.ಕ್ಷಾರೀಯ ಮಣ್ಣಾಗಿದ್ದರೆ ಜಿಪ್ಸಮ್, ಧಾತು ರೂಪದ ಸಲ್ಫರ್ ಮತ್ತು ಹಸಿರು ಗೊಬ್ಬರ ಹಾಕಬೇಕು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಎಲ್. ಬಿ ಅಶೋಕ್ ರವರು ಮಣ್ಣಿನ ಆರೋಗ್ಯ ಕಾಪಾಡುವ ವಿಧಾನಗಳು, ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿದರು. ಗ್ರಾಮದ ರೈತರಾದ ಎಮ್ ದೇವರಾಜು, ಟಿ ದೇವರಾಜು, ಸುರೇಶ, ಶಿವಣ್ಣಗೌಡ, ಮನೋಜ್, ಕುಮಾರ ಮುಂತಾದವರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *