ಸಕಲೇಶಪುರ : ತಾಲೂಕಿನ ಹೆತ್ತೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಒಂದು ಮಕ್ಕಳು ಇಲ್ಲದಿರುವುದು ಕಂಡುಬಂದಿದ್ದು ಅಂಗನವಾಡಿ ಸಹಾಯಕಿಯ ಹತ್ತಿರ ಗರಂ ಆಗಿ ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳ ಬಗ್ಗೆ ಪರಿಶೀಲನೆ ಮಾಡಿ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಕೇಂದ್ರದಲ್ಲಿ ಇಲ್ಲದಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಫೋನ್ ಕರೆ ಮೂಲಕ ತಿಳಿಸಿರುತ್ತಾರೆ.

ಇದೇ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಬಿಸಿ ಊಟದ ಅಡಿಗೆ ಕೊಠಡಿ ಒಳಗೆ ತೆರಳಿ ಸ್ಯಾಂಪಲ್ ನೋಡಿ ಅಡಿಗೆಯನ್ನು ಪರಿಶೀಲನೆ ಮಾಡಿದರು,

ನಂತರ ಬೇಬಿ ಸಿಟ್ಟಿಂಗ್ ಕೊಠಡಿಯೊಳಗೆ ತೆರಳಿ ಮಕ್ಕಳ ಪಠ್ಯೇತರ ಚಟುವಟಿಕೆ ಮಕ್ಕಳನ್ನು ನೃತ್ಯ ವೀಕ್ಷಣೆ ಮಾಡಿ ಖುಷಿ ಯೊಂದಿಗೆ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿಗಳಾದ ಶೃತಿ, ತಾಸಿಲ್ದಾರ್ ಪುರಂದರ, ಶಾಲೆ ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕರು, ಸಮಿತಿ ಮಂಡಳಿ ಅಧ್ಯಕ್ಷರಾದ ಸಚಿನ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನುಸೂಯ, ಗ್ರಾಮಸ್ಥರಾದ ಸುಬ್ರಮಣ್ಯ, ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *