
ಚಗಚಗೆರೆ : ಇತ್ತೀಚಿನ ದಿನಗಳಲ್ಲಿ ಎಲ್ಲಾ ರೈತರು ಮತ್ತೇ ಸಾವಯವ ಕೃಷಿಯತ್ತ ತಮ್ಮ ಗಮನವನ್ನು ಹರಿಸುತ್ತಿದ್ದು ಹಾಗೂ ರಾಸಾಯನಿಕಗಳನ್ನ ಬಳಸುವುದರಿಂದ ಆಗುವ ದುಷ್ಪರಿಣಾಮಗಳು ಮತ್ತು ತಮ್ಮ ಭೂಮಿಯ ಫಲವತ್ತತೆ ಹೇಗೆ ಸ್ವಲ್ಪ ಸ್ವಲ್ಪವೇ ನಾಶವಾಗುತ್ತದೆ ಎಂಬುದನ್ನು ಅರಿತು ಸಾವಯವ ಕೃಷಿ ಮಾಡುವಂತೆ ಯೋಚಿಸುತ್ತಿದ್ದಾರೆ. ಅದಕ್ಕೆ ಅನೇಕ ರೀತಿಯ ಗೊಬ್ಬರಗಳು ಔಷಧಿಗಳನ್ನ ಮಾಡಿ ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
ಅದರಲ್ಲಿ ಜೀವಾಮೃತ ಹಾಗೂ ಪಂಚಗವ್ಯ ಹೇಗೆ ರೈತರಿಗೆ ಕೃಷಿ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನದ ಕೃಷಿ ವಿದ್ಯಾರ್ಥಿಗಳು ಚಗಚಗೆರೆ ರೈತರಿಗೆ ತಿಳಿಸಿಕೊಟ್ಟರು.
ಜೀವಾಮೃತ ಹಾಗೂ ಪಂಚಗವ್ಯಕ್ಕೆ ಬೇಕಾಗುವ ಸಾಮಗ್ರಿಗಳಿಂದ ಹಿಡಿದು ತಯಾರಿಸುವ ವಿಧಾನ , ಬಳಸುವ ವಿಧಾನ ಹಾಗೂ ಅದರ ಅನುಕೂಲಗಳನ್ನು ರೈತರಿಗೆ ತಿಳಿಸಿಕೊಟ್ಟರು.
ಹಾಗೂ ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಮೋದ್ ಜಿ , ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಇವರು ಉಪಸ್ಥಿತರಿದ್ದರು.

