ಸಕಲೇಶಪುರ : ಬೆಳ್ಳಂಬೆಳಿಗ್ಗೆ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ ನೆಡಸಿ ಏಳು ಪಿಕಪ್ ವಾಹನಗಳನ್ನು ಹೇಮಾವತಿ ನದಿ ದಡದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೈಕೆರೆ ಹಾಗೂ ಮಳಲಿ ಗ್ರಾಮದಲ್ಲಿ ಘಟನೆ ನಡೆದಿದ್ದು ಈ ಕಾರ್ಯಾಚರಣೆಯಲ್ಲಿ ಬೈಕೆರೆ ಗ್ರಾಮದಲ್ಲಿ 6 ಪಿಕಪ್ ಹಾಗೂ ಮಳಲಿ ಗ್ರಾಮದಲ್ಲಿ ಒಂದು ಮರುಳು ತುಂಬಿದ ಪಿಕಪ್ ವಾಹನವನ್ನು ಪೋಲಿಸರು ವಶ‌ಕ್ಕೆ ಪಡೆದುಕೊಂಡಿದ್ದಾರೆ.

ಸಕಲೇಶಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಲು ಸಕಲೇಶಪುರ DYSP ಪ್ರಮೋದ್ ಜೈನ್ ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

DYSP ಪ್ರಮೋದ್ ಜೈನ್, ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನೆಡಸಲಾಗಿದ್ದು, ಎಎಸೈಗಳಾದ ಪ್ರಕಾಶ್‌ನಾಯಕ್, ವಜೀರ್, ಪೊಲೀಸ್ ಸಿಬ್ಬಂದಿಗಳಾದ ಕೀರ್ತಿ, ಚಾಲಕ ರಘು, ರೇವಣ್ಣ, ಕೃಷ್ಣನಾಯಕ್, ಅಶೋಕ್, ಶಿವಕುಮಾರ್, ಹರೀಶ್‌ ಮಳಲಿ, ಶ್ರೀಧರ್, ಶ್ರೀಕಂಠಸ್ವಾಮಿ, ರಂಗಸ್ವಾಮಿ, ಗೋಪಾಲ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *