
ಹಾಸನ: ನಗರದ ಹಳೇ ಬಸ್ ನಿಲ್ದಾಣ ಬಳಿ ಇರುವ ಜಟಕಾ ಗಾಡಿ ಶೆಡ್ ನಿರ್ಮಾಣದ ಉದ್ದೇಶಕ್ಕಾಗಿ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ|| ರಾಜಕುಮಾರ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಹೃದಯ ಭಾಗ ನಗರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಾಗದಲ್ಲಿ ಜಟಕಾ ಗಾಡಿ ಶೆಡ್ ನಿರ್ಮಿಸಲು ಮಾತ್ರ ಅವಕಾಶ ನೀಡಬೇಕು. ಆದರೇ ಇದೆ ಜಾಗದಲ್ಲಿ ಈಗ ಕಾಂಪ್ಲೇಕ್ಸ್ ನಿರ್ಮಾಣದ ಕಾಮಗಾರಿ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದರು.
ಈ ಜಾಗದಲ್ಲಿ ಜಟಕಾ ಸ್ಟ್ಯಾಂಡ್ ಮಾಡಲು ಮಾತ್ರ ಅನುಮತಿ ನೀಡಬೇಕೆ ಹೊರತು ಬೇರೆ ಉದ್ದೇಶಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಕಳೆದ ೪೦, ೫೦ ವರ್ಷಗಳಿಂದಲೂ ಈ ನಗರಸಭೆ ಜಾಗದಲ್ಲಿ ಜಟಕಾ ಗಾಡಿ ನಿಲ್ಲಿಸಲೆಂದೆ ಮೀಸಲಿಡಲಾಗಿದೆ.
ಆದರೇ ಈಗ ಇದೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಈ ಕಾಂಪ್ಲೇಕ್ಸ್ ಗೆ ಅನುಮತಿ ನೀಡಬಾರದು. ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಕೋರಿದರು.
ಇದೆ ವೇಳೆ ಸಮಾಜಸೇವಕ ಹೆಚ್.ಆರ್. ನಾಗೇಶ್, ಅಖಿಲ ಕರ್ನಾಟಕ ಡಾ|| ರಾಜಕುಮಾರ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ರತೀಶ್ ಕುಮಾರ್ ಇತರರು ಉಪಸ್ಥಿತರಿದ್ದರು.

