ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮೀನುಗಾರಿಕೆಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಈ ಕಾರ್ಯಕ್ರಮದಲ್ಲಿ ಲಾಭಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಮಿನುಗಾರಿಕೆ ಎಂದರೇನು ವಿವಿಧ ಜಾತಿಯ ಮೀನುಗಳು ಮುಖ್ಯವಾಗಿ ಕಾಟ್ಲಾ, ರೋಹು, ಮೃಗಾಲ್ ಮೀನುಗಳ ಸೂಪಕಗಳು, ಬಣ್ಣ ಹಾಗು ಇಳುವರಿಯ ಬಗ್ಗೆ ತಿಳಿಸಿಕೊಟ್ಟರು.

ಅದರಲ್ಲೂ ಉತ್ತರ ಪ್ರದೇಶ ಮತ್ತು ರಾಜಾಸ್ಥಾನದ ಕೆಲವು ಜಲಾಶಯಗಳಲ್ಲಿ ಇಳುವರಿ 30-40 ಕೆಜಿ ತಲುಪಿದೆ ಎಂದು ತಿಳಿಸಿದರು.

ಇದಲ್ಲದೆ ಜಿಲೇಬಿ ಮೀನು , ಬಿಳಿಕಾಲು ಸೀಗಡಿಯ ಬೇಸಾಯ ಕ್ರಮಗಳು ಆಹಾರ ಪದ್ಧತಿ, ನೂತನ ತಂತ್ರಜ್ಞಾನಗಳ ಬಗ್ಗೆ ತಿಳಿಸಿಕೊಟ್ಟರು .

ಈ ಕಾರ್ಯಕ್ರಮಕ್ಕೆ ಸರಿಸುಮಾರು ಮೂವತ್ತು ಜನ ಸೇರಿ ಮಾಹಿತಿ ಪಡೆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *