
ಸಕಲೇಶಪುರದ ಹಿರಿಯ ವೈದ್ಯರಾದ ಮೋಹನ್ ದಾಸ್ ಶೆಟ್ಟಿಯವರು ಸಕಲೇಶಪುರದ ಜನತೆ ಹಾಗೂ ಕುಟುಂಬದವರನ್ನು ಅಗಲಿ, ದೇವರ ಪಾದವನ್ನು ಸೇರಿದ್ದಾರೆಂದು ತಿಳಿಸಲು ಅತ್ಯಂತ ವಿಷಾದ ಪಡುತ್ತೇವೆ .
ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿಯನ್ನು ನೀಡಲಿ ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು TV 46 ಮಲೆನಾಡು ಚಾನೆಲ್ ಬಳಗ ಪ್ರಾರ್ಥಿಸಿಕೊಳ್ಳುತ್ತದೆ.
ಮೃತರ ಪಾರ್ಥಿವ ಶರೀರವನ್ನು ಇಂದು ಸಾಯಂಕಾಲ 5 ಘಂಟೆಯ ವೇಳೆಗೆ ಅವರ ಸಕಲೇಶಪುರದ ಲಕ್ಷ್ಮೀಪುರದ ನಿವಾಸಕ್ಕೆ ತರಲಾಗುವುದು ಎಂದು ತಿಳಿದು ಬಂದಿದ್ದು, ಅಂತಿಮ ವಿಧಿ ವಿಧಾನಗಳ ಸಮಯದ ಕುರಿತು ನಂತರ ತಿಳಿಸಲಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

