ಬೇಲೂರು ದೇಶ ಭಕ್ತರ ಬಳಗದಿಂದ ಸರ್ಕಾರಿ ಶಾಲೆಯ ೧೦ ನೇ ತರಗತಿಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿನಿಗೆ ಅಭಿನಂದಿಸಲಾಯಿತು.ಬೇಲೂರು. ಮೇ.೧೧”ದೇಶಭಕ್ತರ ಬಳಗದಿಂದ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿನಿಗೆ ಅಭಿನಂದನೆ” :- ಬೇಲೂರು ದೇಶಭಕ್ತರ ಬಳಗದಿಂದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲಾಯ ಕನ್ನಡ ಮಾದ್ಯಮದಲ್ಲಿ ಅತ್ಯುನ್ನತ ಅಂಕ ಪಡೆದ ಗಬ್ಬಲಗೂಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಸಿ.ಎಂ. ಅವರನ್ನು ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ ಕುಮಾರ್ ನೇತೃತ್ವದಲ್ಲಿ ಅತ್ಮೀಯವಾಗಿ ಅಭಿನಂದನೆ ಸಲ್ಲಿಸಿದರು. ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನದಿಂದ ಬಹುತೇಕ ಪೋಷಕರು ಕನ್ನಡ ಮಾದ್ಯಮದಿಂದ ಆಂಗ್ಲ ಮಾದ್ಯಮ ಕಡೆ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ. ಇದ್ದರಿಂದ ನಮ್ಮ‌‌ನೆಲದ ಮೂಲ ಮಾತೃ ಭಾಷೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂತಹ ದಿನದಲ್ಲಿ ಕನ್ನಡ ಮಾದ್ಯಮ ಸರ್ಕಾರಿ ಪ್ರೌಢಶಾಲೆಗಳು ಕೂಡ ಎಸ್ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇ ೧೦೦ ಕ್ಕೆ ೧೦೦ ಫಲಿತಾಂಶ ಪಡೆದಿರುವುದು ನಿಜಕ್ಕೂ ಅಗಮ್ಯವಾಗಿದೆ.ಬೇಲೂರು ತಾಲ್ಲೂಕಿನ ಸುಮಾರು ೮ ಸರ್ಕಾರಿ ಶಾಲೆಗಳು ಕೂಡ ಶೇ ೧೦೦ ಫಲಿತಾಂಶ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ವಿಶೇಷವಾಗಿ ತಾಲ್ಲೂಕಿನ ಗಬ್ಬಲಗೂಡು ಗ್ರಾಮದ ಸರ್ಕಾರಿ ‌ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಿ.ಎಂ.ಅಮೂಲ್ಯ ಯಾವುದೇ ಟೂಷನ್ ಇಲ್ಲದೆ ಶಿಕ್ಷಕರು ತಿಳಿಸಿದ ಪಾಠವನ್ನು ಅರ್ಥ ಮಾಡಿಕೊಂಡು ೧೦ ನೇ ತರಗತಿಯಲ್ಲಿ ೬೨೫ ಕ್ಕೆ ೬೦೦ ಅಂಕವನ್ನು ಪಡೆದು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅವರು ಪೋಷಕರು ಕೂಡ ಅಂತಹ ವಿದ್ಯಾವಂತರಲ್ಲ.ಅದರೂ ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವುದು ಉತ್ತಮ ವಿಷಯವಾಗಿದೆ ಎಂದ ಅವರು ದೇಶಭಕ್ತರ ಬಳಗ ಸದ್ದು ಇಲ್ಲದೆ ಕಳೆದ ಮೂರು ವರ್ಷಗಳಿಂದ ಸಮಾಜದಲ್ಲಿ ಜನಪರ ಮತ್ತು ಸಾಮಾಜಿಕಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ವಿಶೇಷವಾಗಿ ಎಲೆಮರೆಯ ಕಾಯಿಯಂತೆ ಇರುವ ಅಪ್ರತಿಭೆಗಳಿಗೆ ಪುರಸ್ಕಾರ ನೀಡುತ್ತಾ ಬಂದಿದೆ. ಪ್ರತಿ ವರ್ಷ ಬರುವ ರಾಷ್ಟ್ರದ ಭಕ್ತರ ದಿನಾಚರಣೆ ದಿನ ದೇಶಭಕ್ತರನ್ನು ಗೌರವಿಸುವ ಕೆಲಸ ಮಾಡಲಾಗಿದೆ. ಕೃಷಿ ದಿನ ಪ್ರಗತಿ ಪರ ಕೃಷಿಕರಿಗೆ ಸನ್ಮಾನ ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಗುರುತಿಸಿ ಅವರಿಗೆ ಗೌರವಾಭಿಮಾನ ನೀಡುವ ಕೆಲಸಕ್ಕೆ ದೇಶಭಕ್ತರ ಬಳಗ ಮುಂದಾಗಿದೆ. ಇಂದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ‌ಮಾಡಿದ ಅಮೂಲ್ಯ ಈಕೆಯನ್ನು ಅಭಿನಂದನೆ ಸಲ್ಲಿಸಿದ್ದು‌ ನಿಜಕ್ಕೂ ಸಂತೋಷವಾಗಿದೆ. ಮುಂದಿನ ದಿನದಲ್ಲಿ ಈಕೆ ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದೇಶಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ‌ಮೆಡಿಕಲ್ಸ್ ಮಹೇಶ್, ಪದಾಧಿಕಾರಿಗಳಾದ ರಾಜೇಶ್ವರಿ, ಸಾಹಿತಿಗಳಾದ ಮಾರುತಿ ದೊಡ್ಡಕೊಡಿಹಳ್ಳಿ, ನಿರಂಜನ್, ಸೋಂಪುರ ಪ್ರಕಾಶ್, ಮಾಧು ಮಾಲತಿ, ಅನ್ನಪೂರ್ಣ, ವಿದ್ಯಾರ್ಥಿನಿ ಪೋಷಕರಾದ ನೇತ್ರ ಮತ್ತು ಮಂಜುನಾಥ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *