1.93 ಲಕ್ಷ ಮತದಾರರು ಇರುವ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕ ವಿಧಾನಸಭೆಗೆ 2023 ಮೇ 10ಕ್ಕೆ ಚುನಾವಣೆ ನಡೆದಿತ್ತು. ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.ಎಸ್​ಸಿ ಮೀಸಲು ಇರುವ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್ ಮಂಜುನಾಥ್ ರೋಚಕ ಜಯ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್.ಕೆ. ಕುಮಾರಸ್ವಾಮಿ ಅವರ ಸತತ ಗೆಲುವಿನ ಓಟಕ್ಕೆ ಸಿಮೆಂಟ್ ಮಂಜು ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 3ನೇ ಸ್ಥಾನ ಗಳಿಸಿದರೂ ಶೇ. 25ಕ್ಕೂ ಹೆಚ್ಚು ಮತ ಗಳಿಸಿ ತ್ರಿಕೋನ ಫೈಟ್ ಪ್ರದರ್ಶನವಾಗುವಂತೆ ಮಾಡಿದ್ದಾರೆ. ಇನ್ನು, ಹಾಸನದಲ್ಲಿ ಹೆಚ್​ಡಿ ದೇವೇಗೌಡ, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡರಂತಹ ದಿಗ್ಗಜರ ಸಮ್ಮುಖದಲ್ಲಿ ಬಿಜೆಪಿಯಲ್ಲಿ ಪ್ರಬಲ ಮುಖಂಡ ಆಗಿದ್ದವರು ಬಿಬಿ ಶಿವಪ್ಪ. ಹಾಸನದಲ್ಲಿ ಕೇಸರಿ ಬಾವುಟ ಹಾರಿಸಿದ ಮೊದಲಿಗರಲ್ಲಿ ಶಿವಪ್ಪ ಸೇರುತ್ತಾರೆ. 1994 ಮತ್ತು 1999ರ ಚುನಾವಣೆಯಲ್ಲಿ ಬಿಬಿ ಶಿವಪ್ಪ ಬಿಜೆಪಿ ಟಿಕೆಟ್​ನಲ್ಲಿ ಸಕಲೇಶಪುರದಲ್ಲಿ ಗೆಲುವು ಕಂಡಿದ್ದರು. ಅದಾದ ಬಳಿಕ ಬಿಜೆಪಿಗೆ ಇಲ್ಲಿ ಗೆಲುವು ಸಿಕ್ಕಿರಲಿಲ್ಲ. ಈಗ ಕಮಲ ಇಲ್ಲಿ ಮತ್ತೆ ಅರಳಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *