
ಸಕಲೇಶಪುರ : ನಗರದಲ್ಲಿ ಅಯೋಧ್ಯೆ ಮಂತ್ರಕ್ಷತೆ ವಿತರಣೆಯಲ್ಲಿ ಕಾರ್ಯಕರ್ತರು ತೊಡಗಿದ್ದಾರೆ
ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಬಂದಿರುವ ಪವಿತ್ರ ಮಂತ್ರಕ್ಷತೆ ವಿತರಣೆ ಸಕಲೇಶಪುರ ನಗರದ ಮಲ್ಲಿಕಾರ್ಜುನನಗರ ಗಣೇಶನಗರ, ಕುಡುಗರಹಳ್ಳಿ,, ವಾರ್ಡ್ ನಂ 23 ಸಂತೋಷನಗರ ದಲ್ಲಿ ಹಿಂದೂ ಕಾರ್ಯಕರ್ತರು ಜಾತಿ ಮತ ಬಡವ ಶ್ರೀಮಂತ ಎನ್ನದೆ ಪ್ರತಿ ಮನೆಗೆ ಮಂತ್ರಕ್ಷತೆ ತಲುಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕುಡುಗರಹಳ್ಳಿ ವಾರ್ಡ್ ಪುರಸಭೆ ಸದಸ್ಯರ ಮನೆಯಲ್ಲಿ ಮಂತ್ರಕ್ಷತೆಗೆ ಆರತಿ ಪೂಜೆ ಮಾಡಿ ಶ್ರದ್ದೆಯಿಂದ ಸ್ವೀಕರ ಮಾಡಿದರು.
ವಾರ್ಡ್ ನಂ 23 ಸಂತೋಷನಗರದಲ್ಲಿ ಕುಶಾಲಪ್ಪ ಅವರು ವಾರ್ಡ್ ನ ಪ್ರತಿ ಮನೆಯಲ್ಲಿ ಹಬ್ಬದ ವಾತಾವರಣ 22 ಜನವರಿ ಗೆ ಆಗಬೇಕು ಎಂದು ಮನೆಯವರಲ್ಲಿ ಮನವಿ ಮಾಡಿದರು
ಗಣೇಶನಗರದಲ್ಲಿ 30 ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಮುಖಂಡ ಭಾಗೇಶ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಂತ್ರಕ್ಷತೆ ವಿತರಣೆ ಮಾಡಿ 22.ಜನವರಿಗೆ ಕಾರ್ಯಕರ್ತರು ಎಲ್ಲರೂ ಸೇರಿ 18*8 ಅಡಿ ರಾಮನ ಕಟೌಟ್ ಹಾಕಿ ವಿಶೇಷ ಪೂಜೆ ಹೋಮ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಭಾಗೇಶ್ ತಿಳಿಸಿದರು.
ಕುಡುಗರಹಳ್ಳಿ ಸಚಿನ್, ಕೌಶಿಕ್ ಬಜರಂಗದಳ ಜಿಲ್ಲಾ ಸಹಸಂಯೋಜಕ,ದುಷಯಾಂತ್ ಗೌಡ, ಸಂತೋಷ್ ದೀಲಿಪ, ಅಚಂಗಿ ಮನು, ಗಿರೀಶ್,ರವಿ, ಉತ್ತಮ್, ಮಾನ್ವಿತ್ ಮಂಜು ಕುಶಾಲಪ್ಪ, ಸಚಿನ್, ದೀಕ್ಷಿತ್, ಹೆಬ್ಬಸಾಲೆ ರಮೇಶ್, ಉಪಸ್ಥಿತಿ ಇದ್ದರು
















