
ಹಾಸನ : ಕೃಷಿ ವಿಶ್ವವಿದ್ಯಾಲಯ , ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ , ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023 -24 ರ ಅಂಗವಾಗಿ ಅಂತಿಮ ವರ್ಷದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ಡಯರಗನಾಳು ಗ್ರಾಮದಲ್ಲಿ ” ಜೈವಿಕ ಗೊಬ್ಬರಗಳ ಕುರಿತು ಅರಿವು” ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಕಾರ್ಯಕ್ರಮದಲ್ಲಿ ಜೈವಿಕ ಗೊಬ್ಬರಗಳ ಅವಶ್ಯಕತೆ,ಅವುಗಳು ಹೇಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ,ಬಳಸುವ ವಿಧಾನ, ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಜೈವಿಕ ಗೊಬ್ಬರಗಳ ಪಾತ್ರ ಹಾಗೂ ಮಾರುಕಟ್ಟೆ ಲಭ್ಯತೆ ಕುರಿತು ತಾಂತ್ರಿಕ ಮಾಹಿತಿಯನ್ನು ಅಮೃತಕುಮಾರ.ಪಿ .ರವರು ವಿವರಿಸಿದರು
ಜೈವಿಕ ಗೊಬ್ಬರಗಳ ಪ್ರಯೋಜನ ಹಾಗೂ ಸೂಕ್ತ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾ ಗಿ ಆಗಮಿಸಿದ್ದ ಡಾ.ಭರತಪ್ರಸಾದ .ಸಿ.ಟಿ.ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ, ಡಾ.ವಾಗ್ಮರೆ ವಿಜಯಕುಮಾರ ವೀರಪ್ಪ ಸಹಾಯಕ ಪ್ರಾಧ್ಯಾಪಕರು ಸೂಕ್ಷ್ಮ ಜೀವವಿಜ್ಞಾನ ವಿಭಾಗ ಇವರು ರೈತರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮಕ್ಕೆ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು .
