
ಮಲೆನಾಡು ಭಾಗಗಳಲ್ಲಿ ಕಾಡಾನೆಗಳು ಪ್ರಾಣ ಹಾನಿ ಹಾಗೂ ಬೆಳೆಹಾನಿ ಮಾಡುತ್ತಿರುವ ಹಿನ್ನಲೆಯಲ್ಲಿ ಕಾಡಾನೆ ಸೆರೆಹಿಡಿಯಲು ಬೇಲೂರು ತಾಲೂಕಿಗೆ ಆಗಮಿಸಿರುವ ಸಾಕಾನೆಗಳಿಗೆ ಇಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅವರು ಪೂಜೆ ಸಲ್ಲಿಸಿದರು.
ನಮ್ಮ ಮಲೆನಾಡು ಭಾಗದಲ್ಲಿ ಬಂದು ಅವಾಂತರ ಸೃಷ್ಠಿಸುತ್ತಿರುವ ಹಾಗೂ ಜನರನ್ನು ಭಯಭೀತರನ್ನಾಗಿ ಮಾಡಿರುವ ಕಾಡಾನೆಗಳ ಸೆರೆಗಾಗಿ ಬಿಕ್ಕೋಡು ಗ್ರಾಮದಲ್ಲಿ ʼಕಾಡಾನೆ ಸೆರೆ ಕಾರ್ಯಾಚರಣೆʼಗೆ ಶಾಸಕ ಹೆಚ್.ಕೆ .ಸುರೇಶ್ ಅವರು ಪೂಜೆ ಸಲ್ಲಿಸುವ ಮೂಲಕ, ಚಾಲನೆ ನೀಡಲಾಯಿತು.
ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಈ ಕಾರ್ಯಚಾರಣೆ ನಡೆಯಲಿದ್ದು, ಸೆರೆಯಾದ ಆನೆಗಳನ್ನು ಅರಣ್ಯ ಇಲಾಖೆ ಸ್ಥಳಾಂತರ ಮಾಡಲಿದೆ.


