
ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಙಾನ ವಿಧ್ಯಾರ್ಥಿಗಳು ರೆಷ್ಮೇ ಕೃಷಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಹಿಪ್ಪುನೇರಳೆ ಬೇಸಾಯ ಕ್ರಮಗಳು, ಕೀಟಗಳು, ರೋಗಗಳು, ಹಾಗೂ ಹಿಪ್ಪುನೇರಳೆಯ ತಳಿಗಳು ಮತ್ತು ರೆಷ್ಮೇಹುಳುವಿನ ವಿವಿಧ ಹಂತಗಳು ರೆಷ್ಮೇಹುಳುವಿಗೆ ಬರುವಂತಹ ರೋಗಗಳು, ಕೀಟಗಳು ಹಾಗೂ ಅವುಗಳ ಹತೋಟಿಯ ಬಗ್ಗೆ ಈ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಮಹಾವಿದ್ಯಾಲಯದ ಡಾ. ಸುನೀತಾ ಟಿ. ಆರ್. ಕೀಟಶಾಸ್ತ್ರ ವಿಭಾಗ ಉಪಸ್ಥಿತರಿದ್ದರು.
ಹಾಗೂ ಗ್ರಾಮಸ್ಥರು ಮತ್ತು ರೈತರು ಸಹ ಉಪಸ್ಥಿತರಿದ್ದರು.
