ಅರಸೀಕೆರೆ : ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಹುಳಿಯಾರು ರಸ್ತೆಯಲ್ಲಿ ಕೆಂಡದ ಗುಂಡಿ ಯಿಂದ ಶಿವಾಲಯ ವರೆಗೂ ಚರಂಡಿ ದುರಸ್ತಿ ಮಾಡದೆ ಮಸೀದಿ ಹತ್ತಿರ ಸುಮಾರು ವರ್ಷಗಳಿಂದ ದೊಡ್ಡ ಚರಂಡಿಗೆ ಸೇತುವೆ ಇಲ್ಲದ ಕಾರಣ ಮಳೆ ಬಂದರೆ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತದೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ಚರಂಡಿ ನೀರು ನುಗುತ್ತದೆ ಅದನ್ನು ಸರಿಪಡಿಸದೆ ಏಕಾಏಕಿ ರಸ್ತೆ ಕಾಮಗಾರಿ ಶುರು ಮಾಡಿರುವುದನ್ನು ವಿರೋಧಿಸಿದ ಸ್ಥಳೀಯ ಸಾರ್ವಜನಿಕರು ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ತಡೆದರು.

ಇಲ್ಲಿ ಅಲ್ಪ ಮಳೆ ಬಂದರೂ ಸಹ ಚರಂಡಿ ನೀರು ರಸ್ತೆಗೆ ಹರಿಯುತ್ತದೆ ಮಳೆ ಕಾಲದಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತರು ಆದಷ್ಟು ಬೇಗ ಕೆಂಡದ ಗುಂಡಿಯಿಂದ ಶಿವಾಲಯ ದೇವಸ್ಥಾನದವರೆಗೆ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಆದರೆ ಮೂರು ತಿಂಗಳು ಆದರೂ ಸಹ ಚರಂಡಿ ಕಾಮಗರಿ ಮಾಡದೆ ರಸ್ತೆ ಕಾಮಗಾರಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು

ಈ ರಸ್ತೆ ಮಾರ್ಗದಿಂದ ಹೊಯ್ಸಳ ಕಾಲದ ಶಿವಾಲಯ ದೇವಸ್ಥಾನ ಹಾಗೂ ಪ್ರಸಿದ್ಧ ಚಿಕ್ಕು ತಿರುಪತಿ ದೇವಸ್ಥಾನಕ್ಕೆ ಹೋಗುವ ಮಾರ್ಗವಾಗಿದ್ದು ಇಲ್ಲಿ ಸಾವಿರಾರು ಜನರು ದರ್ಶನಕ್ಕೆ ಬರುತ್ತಾರೆ ಹಾಗೂ ಇಲ್ಲಿ ಗಾರ್ಮೆಂಟ್ಸ್ ಮತ್ತು ಸ್ಕೂಲ್ ಗಳಿರುವ ಕಾರಣ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುವ ಆದರಿಂದ ಈ ದಾರಿಯಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸದೆ ರಸ್ತೆ ಕಾಮಗಾರಿ ಮಾಡುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸೈಯದ್ ಅನ್ಸರ್ ಹಾಗೂ ಸಮೀವುಲ್ಲಾ ನಮ್ಮ ವಾಹಿನಿಯೊಂದಿಗೆ ಮಾತನಾಡಿ ರಸ್ತೆಯ ಕಾಮಗಾರಿಯ ಅವಶ್ಯಕತೆ ಇರಲಿಲ್ಲ ಮೊದಲು ಚರಂಡಿ ವ್ಯವಸ್ಥೆ ಸರಿಪಡಿಸಬೇಕು.

ಈ ದಿನ ನಾವು ರಸ್ತೆಯ ಕಾಮಗಾರಿಯನ್ನು ನಿಲ್ಲಿಸುತಿದ್ದೇವೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರಂಡಿ ವ್ಯವಸ್ಥೆ ಸರಿ ಪಡಿಸಬೇಕು ಇಲ್ಲವಾದರೆ ಕಾಮಗಾರಿ ನಡೆಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯ ವಾಹನ ಚಾಲಕನು ರಸ್ತೆಯಲ್ಲಿ ಆಗುವ ತೊಂದರೆಯ ಬಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬು ನಾರುತಿದು ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುವ ಮೂಲಕ ಚರಂಡಿ ವ್ಯವಸ್ಥೆಯು ಸರಿಪಡಿಸಿ ತದ ನಂತರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *