ಹಾಸನ: ನಗರದ ಡೈರಿ ವೃತ್ತದ ಬಳಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಿಲ್ಲಾ ಪೊಲೀಸ್ ಮತ್ತು ಸಂಚಾರ ಪೊಲೀಸ್ ಠಾಣೆ ಇವರ ಸಂಯುಕ್ತಾಶ್ತಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಂಚಾರಿ ನಿಯಮಗಳ ಅರಿವು ಹಾಗೂ ಹೆಲ್ಮೆಟ್ ಜಾಗೃತಿ ಬೈಕ್ ಜಾಥಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ಕೊಟ್ಟರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ೨೦೨೪ ರ ಅಂಗವಾಗಿ ಹಾಸನ ಜಿಲ್ಲಾ ಪೊಲೀಸ್ ಹಾಗೂ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, ಹಿಂದೆ ರಸ್ತೆಗಳೂ ಸರಿಯಿಲ್ಲದೇ ಅಪಘಾತಗಳಾಗಿ ಗಾಯಗಳಾಗುತ್ತಿದ್ದವು.

ಪ್ರಸ್ತೂತ ದಿನಗಳಲ್ಲಿ ರಸ್ತೆಗಳು ಉತ್ತಮವಾಗಿ ಸಾಯುವರ ಸಂಖ್ಯೆ ಹೆಚ್ಚಾಗಿದೆ. ದ್ವೀಚಕ್ರ ವಾಹನದಲ್ಲಿ ಅಪಘಾತವಾದಗ ಹೆಚ್ಚಾಗಿ ಹೆಲ್ಮೆಟ್ ಧರಿಸದೆ ತಲೆಗೆ ಪೆಟ್ಟಾಗಿ ಮೃತಪಟ್ಟಿರುವ ಸಂಖ್ಯೆ ಹೆಚ್ಚಾಗಿದೆ. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೇ ಮತ್ತೆ ಹಾಕಿ ರಿಪೇರಿ ಮಾಡಬಹುದು.

ಆದರೇ ತಲೆಗೆ ಒಂದು ಸಾರಿ ಹೊಡೆತ ಬಿದ್ದರೇ ಸಾಮಾನ್ಯವಾಗಿ ಉಳಿಯುವುದು ಕಷ್ಟ. ಹಾಸನದಲ್ಲಿ ವಾಹನಗಳ ವೇಗ ಹಾಗೂ ಅಪಘಾತಗಳು ಹೆಚ್ಚಾಗಿವೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ಈ ಹೆಲ್ಮೇಟ್ ಜಾಥ ಮಾಡಲಾಗುತ್ತಿದೆ. ಯಾರಾರು ದ್ವೀಚಕ್ರ ವಾಹನ ಚಾಲನೆ ಮಾಡುತ್ತಿದ್ದೀರಿ ತಪ್ಪದೆ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಪಾಲಿಸಬೇಕು ಎಂಬುದು ಕೋರಿಕೆ. ತಮ್ಮ ಕುಟುಂಬ ಸದಸ್ಯರು ತಮ್ಮನ್ನೇ ನಂಬಿಕೊಂಡು ಜೀವನ ಮಾಡುತ್ತಿರುತ್ತಾರೆ ಅದನ್ನು ಗಮನದಲ್ಲಿ ಇಟ್ಟುಕೊಂಡು ತಪ್ಪದೆ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಉಳಿಸಿಕೊಳ್ಳುವಂತೆ ಮನವಿ ಮಾಡಿದರು.

ಬೈಕ್ ಜಾಥ ಕಾರ್ಯಕ್ರಮದಲ್ಲಿ ಫ್ರೋಫೇಶನರಿ ಐ.ಪಿ.ಎಸ್. ಅಧಿಕಾರಿ ಶ್ಯಾಮ್, ಡಿವೈಎಸ್ಪಿ ಮುರುಳಿದರನ್, ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *