
ಸೈಕಲ್ ತುಣಿದು ಶಾಂತಿ ಸಂದೇಶ ಸಾರುವ ಹಾಸನ ನಗರದ ನಿವಾಸಿ ನಾಗರಾಜಗೌಡ
ಹಾಸನ: ಸಮಾಜದಲ್ಲಿ ಶಾಂತಿ ತಂದು ಸರ್ವಧರ್ಮ ಸಮಾಬಾಳು ಎಂದು ಸಾರುವ ನಿಟ್ಟಿನಲ್ಲಿ ಹಾಸನ ನಗರದ ನಿವಾಸಿ ನಾಗರಾಜಗೌಡ ಕಳೆದ ಆರು ವರ್ಷಗಳಿಂದಲೂ ಸೈಕಲ್ ತುಣಿಯುವ ಮೂಲಕ ಆಲ್ ಇಂಡಿಯಾ ಸೈಕಲ್ ಯಾತ್ರೆ ಆರಂಭಿಸಿ ಜಾಗೃತಿ ಮೂಡಿಸಿದ್ದಾರೆ.
ನಗರದ ಹೊಸಲೈನ್ ರಸ್ತೆಯಲ್ಲಿ ವಾಸವಾಗಿರುವ ನಾಗರಾಜಗೌಡ ಎಂಬುವರೇ ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಒಂದು ಹಳೆ ಸೈಕಲ್ ನಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ದೇಶ ಸುತ್ತಿ ಬಂದಿದ್ದಾರೆ.
ಇತ ಬ್ರಹ್ಮಚಾರಿಯಾದರೂ ಸಮಯ ವ್ಯರ್ಥ ಮಾಡದೇ ದೇಶ ಸುತ್ತಿ ತಾನು ಕೂಡ ಅರಿತು ಮತ್ತೊಬ್ಬರಿಗೆ ಒಂದು ಸಂದೇಶ ತಿಳಿಸುವ ಕೆಲಸಕ್ಕೆ ಮುಂದಾಗಿರುವುದು ಉತ್ತಮವಾಗಿದೆ.
ಈ ಸೈಕಲ್ ಸುತ್ತ ಸರ್ವಧರ್ಮ ಒಂದೆ ಎಂಧು ಸಾರುವ ಭಾವಚಿತ್ರಗಳು, ದೇಶ ವಿದೇಶಗಳ ಭಾವಚಿತ್ರ, ವಂದೇ ನಾಡು ಒಂದೇ ಕುಲವು, ಇನ್ನು ಜಗಳ, ಯುದ್ಧ, ಧ್ವೇಷ ಏಕೆ ಬೇಕು? ರಾಜನೀತಿ ಪಾರ್ಟಿ ಯಾವುದೇ ಇರಲಿ ಕೆಲಸ ನೋಡಿ ಮತ ಹಾಕಿ ಜೊತೆಗೆ ದೇಶ ಬದಲಾಗಿದೆ. ಬಡತನ ಕಮ್ಮಿ ಆಗಿದೆ. ಕುಷಿಯಿಂದ ಬದುಕಿ, ದೇವರನ್ನು ಆರಾಧಿಸಿ, ದೇಶ ಮೊದಲು ಆಮೇಲೆ ರಾಜನೀತಿ, ಕಾಯಕವೇ ಕೈಲಾಸ, ಜೈ ಜವಾನ್ ಜೈ ಕಿಸಾನ್ ಎನ್ನುವ ಅಕ್ಷರಗಳು ಸೈಕಲ್ ಸುತ್ತ ನಾಮಫಲಕದಲ್ಲಿ ರಾರಾಜಿಸುತ್ತಿತ್ತು.
ಇದೆ ವೇಳೆ ನಾಗರಾಜಗೌಡ ಮಾಧ್ಯಮದೊಂದಿಗೆ ಮಾತನಾಡಿ, ನಾನು ೨೦೧೭ ರಲ್ಲಿ ಒಂದು ಸೈಕಲ್ ಯಾತ್ರೆ ಶುರುಮಾಡಿದ್ದು, ದೇಶ ಭಕ್ತಿ, ವಿಶ್ವಶಾಂತಿ, ಸರ್ವಧರ್ಮ ಸಮಬಾಳು, ಹಸಿರು ಗಿಡ ಬೆಳೆಸಿ ಎಂಬುದು ಒಂದು ಕಡೆಯಾದರೇ ಜೊತೆಗೆ ಯುವಕರು ಹೆಚ್ಚು ಡ್ರಗ್ಸ್ ನಂತಹ ಕೆಟ್ಟ ಚಟಗಳಿಗೆ ಮೊರೆ ಹೋಗುತ್ತಿದ್ದು, ಇದನ್ನೆಲ್ಲಾ ವಿರೋಧ ಮಾಡಲು ಹಾಸನ ನಗರದಿಂದ ಸೈಕಲ್ ಯಾತ್ರೆ ಶುರುಮಾಡಲಾಯಿತು ಎಂದರು.
ಕರ್ನಾಟಕದಿಂದ ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ಹರಿಯಾಣ, ಪಂಜಾಬ್, ಹಿಮಾಚಲ್, ಉತ್ತರ ಖಂಡ್, ದೆಹಲಿ, ಉತ್ತರ ಪ್ರದೇಶ್, ಮದ್ಯಪ್ರದೇಶ್, ಆಂದ್ರ ಪ್ರದೇಶ್, ತೆಲಂಗಾಣ ಸುತ್ತುಕೊಂಡು ಈಗ ನಮ್ಮ ಹಾಸನಕ್ಕೆ ಬರಲಾಗಿದೆ ಎಂದರು. ಕಳೆದ ೩೦ ವರ್ಷ ಬಿಟ್ಟು ಬಂದರೂ ಹಾಸನದಲ್ಲಿ ಏರಿಯಾಗಳು ಹೇಗೆ ಅದೆ ಆಗೆ ಇದ್ದು, ಹೊರಗಡೆಯಿಂದ ಅನೇಕರು ಬಂದು ಎಲ್ಲಾ ಹೊಸ ಮನೆಗಳು ಎದ್ದಿವೆ.
ಇಡೀ ದೇಶದಲ್ಲಿ ಜಾತಿವಾದಗಳೂ ಹೆಚ್ಚಾಗಿದೆ. ಹಿಂದೂಸ್ತಾನ ಎಂದರೇ ಸರ್ವಧರ್ಮ ಸಹಬಾಳ್ವೆಯಾಗಿದೆ. ಕುವೆಂಪು ಅವರು ಹೇಳಿದಂತೆ ನಾವೆಲ್ಲಾ ವಿಶ್ವಮಾನವರು. ವಿಶ್ವ ಶಾಂತಿಗಾಗಿ ನಾವೆಲ್ಲರೂ ಜಾತಿಮತಗಳನ್ನು ಮರೆತು ನಾವೆಲ್ಲಾ ಒಂದಾಗಿ ಸದ್ಬಾವನೆಯಿಂದ ಪ್ರೀತಿ ವಿಶ್ವಾಸದಿಂದ ನಾವೆಲ್ಲಾ ಬಾಳಬೇಕು. ಇದು ಜೀವನದ ಪರಮಗುರಿ.
ನಮ್ಮ ಜೀವಿತವಧಿಯಲ್ಲಿ ಸಮಾಜಕ್ಕಾಗಿ ನಾವುಗಳು ಏನನ್ನು ಮಾಡುತ್ತೇವೆ? ನಾವೆಲ್ಲಾ ಪ್ರೀತಿ ವಿಶ್ವಾಸದಿಂದ ಬಾಳಬೇಕೆ ಹೊರತು ಹೊಡೆದು ಬಡೆದಾಡಬಾರದು ಎಂದು ಕರೆ ನೀಡಿದರು.



